ಪವಾಡ ಬಸವೇಶ್ವರ ಜಾತ್ರಾ ನಿಮಿತ್ಯ 101 ಜಂಗಮರ ಪಾದಪೂಜೆ ಕಾರ್ಯಕ್ರಮ 

ಪವಾಡ ಬಸವೇಶ್ವರ ಜಾತ್ರಾ ನಿಮಿತ್ಯ 101 ಜಂಗಮರ ಪಾದಪೂಜೆ ಕಾರ್ಯಕ್ರಮ 

ವಿಜಯಪುರ ಡಿ,09: ಪವಾಡ ಬಸವೇಶ್ವರ ಜಾತ್ರಾ ನಿಮಿತ್ಯವಾಗಿ ಮಹಾಶಿವಶರಣ ನಾಲತವಾಡ ವೀರೇಶ್ವರ ಶರಣರ ಪ್ರವಚನದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ರಾಜೇಶ್ವರಿ ಯಾದವಾಡ ಇವರಿಂದ 101 ಜಂಗಮರ ಪಾದಪೂಜೆ ಕಾರ್ಯಕ್ರಮವನ್ನು ಜರುಗಿತು.
ಪ.ಪೂ.ಷ.ಬ್ರ. ಒಡೆಯರ ಶಿವಪ್ರಕಾಶ ಶಿವಾಚಾರ್ಯ ಹಿರೇಮಠ ಬಸವನ ಬಾಗೇವಾಡಿ ಇವರ ಸಾನ್ನಿಧ್ಯದಲ್ಲಿ ನಡೆಯಿತು.  ಈ ಸಂದರ್ಭದಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೆ ಆಧ್ಯಾತ್ಮದ ಬಗ್ಗೆ ಅರಿವು ಮೂಡಿಸಿದರು. 

ಅದ್ಯಕ್ಷತೆಯನ್ನು ಶಂಕರ ಕೂಡಗಿ, ಮುಖ್ಯ ಅತಿಥಿಗಳಾಗಿ ರವಿ ಬಿಸನಾಳ, ಚಿಕ್ಕಯ್ಯ ನಂದಿಕೋಲಮಠ, ಶಶಿಕಾಂತ ಬಸವಪ್ರಭು, ಪುಷ್ಪಾ ಮಹಾಂತಮಠ, ಶಿವಕಾಂತವ್ವ ಹಿರೇಮಠ, ಶಶಿಕಲಾ ಇಜೇರಿ ಇನ್ನಿತರರು ಉಪಸ್ಥಿತರಿದ್ದರು.