ಬಸವ ಪ್ರಾಧಿಕಾರ ಘಟಕ ನಾಮಕರಣ :ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನ

 ಬಸವ ಪ್ರಾಧಿಕಾರ ಘಟಕ ನಾಮಕರಣ :ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನ

ವಿಜಯಪುರ,31:ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಬಸವ ಪ್ರಾಧಿಕಾರವನ್ನು ಜಾರಿಗೆ ತರಬೇಕು ಮತ್ತು ಕೂಡಗಿ ಅಣುಸ್ಥಾವರಕ್ಕೆ ಜಗಜ್ಯೋತಿ ಬಸವೇಶ್ವರ ಅಣುಸ್ಥಾವರ ಘಟಕ ಎಂದು ನಾಮಕರಣ ಮಾಡುವ ಕುರಿತು ಸರಕಾರದಿಂದ ಅಭಿಪ್ರಾಯ ವರದಿ ಕೇಳಿದ್ದು,  ಈ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆ- ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.
ಸಾರ್ವಜನಿಕರಿಗೆ ಈ ಕುರಿತಂತೆ ಆಕ್ಷೇಪಣೆ-ಅಭಿಪ್ರಾಯಗಳಿದ್ದಲ್ಲಿ ದಿನಾಂಕ : 08-01-2017ರೊಳಗಾಗಿ ತಮ್ಮ ಆಕ್ಷೇಪಣೆ-ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳು ವಿಜಯಪುರ ಇವರ ಕಚೇರಿಗೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.