ಬಾಗಲಕೋಟೆ ವಿಷನ್-2025 : ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

ಬಾಗಲಕೋಟೆ ವಿಷನ್-2025 : ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

ಬಾಗಲಕೋಟೆ, ಅ. 7 : ಬಾಗಲಕೋಟೆ ಜಿಲ್ಲೆಯ ಸಮಗ್ರ ಅಭಿವೃದ್ದಿ ಕುರಿತಂತೆ ಬಾಗಲಕೋಟ ವಿಷನ್-2025 ಯೋಜನೆಯ ಮುನ್ನೋಟ ಕೈಪಿಡಿ ತಯಾರಿಸಲು ಜಿಲ್ಲಾಡಳಿತ ಸಿದ್ದತೆ ಕೈಗೊಂಡಿದೆ.
       ಮುಂದಿನ ಏಳು ವರ್ಷಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಕೃಷಿ ಮತ್ತು ಇತರೆ ಸಂಬಂಧಿಸಿದ ಕ್ಷೇತ್ರ, ಉದ್ಯೋಗ ಮತ್ತು ಕೌಶಲ್ಯ, ಆರೋಗ್ಯ ಮತ್ತು ಪೋಷಣೆ, ಸ್ಮಾರ್ಟ ನಗರಗಳು ಸೇರಿದಂತೆ ನಗರ ವಲಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ, ಕಾನೂನು ಮತ್ತು ಸುವ್ಯವಸ್ಥೆ, ನ್ಯಾಯ, ಮೂಲಸೌಕರ್ಯ, ಆಡಳಿತ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು, ಸೇವೆಗಳು, ಕೈಗಾರಿಕಾ ಅಭಿವೃದ್ದಿ ಒಳಗೊಂಡ 13 ವಲಯಗಳನ್ನು ವಿಭಾಗಿಸಲಾಗಿದೆ. 
       ವಿದ್ಯಾರ್ಥಿಗಳು, ಕಾರ್ಮಿಕರು, ಧಾರ್ಮಿಕ ಮುಖಂಡರು, ರೈತರು ಒಳಗೊಂಡಂತೆ ಸಮಾಜದ ವಿವಿಧ ವಲಯದ ಚಿಂತಕರು, ಗಣ್ಯರು, ಪ್ರಾದ್ಯಾಪಕರು, ಶಿಕ್ಷಕರು, ವಿವಿಧ ಪಕ್ಷಗಳ ಮುಖಂಡರು, ವಾಣಿಜ್ಯೋದ್ಯಮಿಗಳು, ವೈದ್ಯರು, ಸರಕಾರಿ ಹಾಗೂ ಸರ್ಕಾರೇತರ ನೌಕರರು, ಸಂಘ-ಸಂಸ್ಥೆಗಳು, ಸಮಾಜದ ವಿವಿಧ ವಲಯದವರು ಅಭಿವೃದ್ದಿಯ ಏಕ ಉದ್ದೇಶದಿಂದ ಜಿಲ್ಲೆಯ ಯಾವ ವಲಯಗಳ ಅಭಿವೃದ್ದಿಗೆ ಕೈಗೊಳ್ಳಬೇಕಾದ ಕಾರ್ಯಗಳು, ಸಲಹೆಗಳು, ಅಭಿಪ್ರಾಯಗಳನ್ನು hಣಣಠಿ://bಚಿgಚಿಟಞoಣ.ಟಿiಛಿ.iಟಿ/bgಞvisioಟಿ2025.hಣm ಲಿಂಕ್‍ನಲ್ಲಿ ವ್ಯಕ್ತಪಡಿಸಬಹುದಾಗಿದೆ.
      ನಿಮ್ಮ ಸಲಹೆ ಅಮೂಲ್ಯವಾಗಿದ್ದು, ಎಲ್ಲರೂ ಕರ್ನಾಟಕದ ಅಭಿವೃದ್ದಿ ಹಾಗೂ ಬಾಗಲಕೋಟೆಯ ಅಭಿವೃದ್ದಿಯ ದೃಷ್ಠಿಕೋನದಿಂದ ಕ್ರೀಯಾತ್ಮಕವಾದ ಅಭಿಪ್ರಾಯವನ್ನು ಕಳುಹಿಸುವಂತೆ ಜಿಲ್ಲಾಡಳಿತ ಪ್ರಕಟಣೆಯಲ್ಲಿ ಕೋರಿದೆ.