ಬಾದಾಮಿಯಲ್ಲಿ ಕಾಂಗ್ರೆಸ್ ಗೆ ಐ ಟಿ ಶಾಕ್

ಬಾದಾಮಿಯಲ್ಲಿ ಕಾಂಗ್ರೆಸ್ ಗೆ ಐ ಟಿ ಶಾಕ್

ಕರ್ನಾಟಕ ವಿಧಾನಸಭಾ ಚುನಾವಣಾ ನಿಮಿತ್ತ ರಾಜ್ಯ ರಾಜಕಾರಣಿಗಳು ಬ್ಯುಸಿಯಿರುವ ಸಂದರ್ಭದಲ್ಲಿ, ಇಂದು ಬೆಳ್ಳಂ ಬೆಳ್ಳಗ್ಗೆ ಬಾದಾಮಿಯಲ್ಲಿ ಕಾಂಗ್ರೆಸ್ ಪಾಳಯಕ್ಕೆ ಐ ಟಿ ಶಾಕ್ ನೀಡಿದೆ.
 
ಮಧ್ಯರಾತ್ರಿಯೇ ಕಾಂಗ್ರೆಸ್ ನಾಯಕ ಆನಂದ್ ಸಿಂಗ್ ಒಡೆತನದ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 10 ಮಂದಿ ಐಟಿ ಇಲಾಖೆ ಅಧಿಕಾರಿಗಳು ಬಿಗಿ ಭದ್ರತೆ ನಡುವೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಇನ್ನು ಆನಂದ್ ಸಿಂಗ್ ಕೆಲವು ದಿನಗಳ ಹಿಂದಷ್ಟೇ ಬಿಜೆಪಿಯಿಂದ ಕಾಂಗ್ರೆಸ್ ಗೆ ಪಕ್ಷಾಂತರ ಆಗಿದ್ದರು.