ಬಾಗಲಕೋಟ ಮತಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ವೀರೇಶ ಆರ್. ಹಿರೇಮಠ

ಬಾಗಲಕೋಟ ಮತಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ವೀರೇಶ ಆರ್. ಹಿರೇಮಠ

    ಬಾಗಲಕೊಟ, ನ.10- ಬಾಗಲಕೋಟ ವಿಧಾನಸಭಾ ಮತಕ್ಷೇತ್ರದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಬಯಸಿದ್ದು ಭಾರತಿಯ ಜನತಾ ಪಕ್ಷದ ಪ್ರಬಲ ಆಕಾಂಕ್ಷಿಯಾಗಿರುತ್ತೇನೆ. ನಾನು ವೀರೇಶ ಆರ್. ಹಿರೇಮಠ ಸುಮಾರು 2004ರಿಂದ 2013ರ ವರೆಗೆ ಭಾರತೀಯ ಜನತಾ ಪಕ್ಷವನ್ನು ಸೇರಿ ಸಕ್ರೀಯ ಕಾರ್ಯಕರ್ತನಾಗಿ ಮತಕ್ಷೇತ್ರದ ಸರ್ವೋದಯ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ. ಅಲ್ಲಿಂದ ಪ್ರತಿ ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಭಾರತೀಯ ಜನತಾ ಪಕ್ಷದ ಪರವಾಗಿ ಕೆಲಸ ನಿರ್ವಹಿಸಿದ್ದೇನೆ. ನಂತರ 2014ರಲ್ಲಿ ಪರಿಶ್ರಮ ಗ್ರಾಮೀಣ ಅಭಿವೃದ್ಧಿ, ನಗರ, ಸಾಂಸ್ಕøತಿಕ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ನಂತರ ಪರಿಶ್ರಮ ರಾಜ್ಯ ಅಸಂಘಟಿತ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರ ಸಂಘಟನೆಯ ಅಧ್ಯಕ್ಷನಾಗಿ ಸಹಕಾರಿ ಕ್ಷೇತ್ರದಲ್ಲಿ ಪರಿಶ್ರಮ ಕ್ರೇಡಿಟ್ ಕೋ-ಆಫ್‍ರೇಟಿವ್ ಸೊಸಾಯಿಟಿಯ ಮುಖಂಡನಾಗಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಪರಿಶ್ರಮ ವಾರ್ತೆ ಕನ್ನಡ ದಿನ ಪತ್ರಿಕೆ ಪ್ರಾರಂಭ ಮಾಡಿ 2016ರಲ್ಲಿ ಪರಿಶ್ರಮ ಏಕ್ಸ್‍ಪ್ರೇಸ್ ಎಂಬ ಕನ್ನಡ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಜನಸಾಮಾನ್ಯರ ಸೇವೆ ಸಲ್ಲಿಸುತ್ತಿದ್ದೇನೆ.
    2016ರಲ್ಲಿ ಬಾಗಲಕೋಟ ವಿಧಾನಸಭಾ ಮತಕ್ಷೇತ್ರದ ಗ್ರಾಮೀಣ ಉಪಾಧ್ಯಕ್ಷನನ್ನಾಗಿ ಭಾರತೀಯ ಜನತಾ ಪಾರ್ಟಿ ನೇಮಿಸಿತ್ತು, 2017 ರಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯಿಂದ ಸ್ಪರ್ಧಿಸಿ ಕೆಲವೇ ಕೆಲವು ಮತಗಳ ಅಂತರದಲ್ಲಿ ಸೋಲು. ಆದ ಕಾರಣ ಭಾರತಿಯ ಜನತಾ ಪಕ್ಷದ ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದ ನಾಯಕರುಗಳು ನನಗೆ ಈ ಬರುವ 2018ರ ಚುನಾವಣೆಯಲ್ಲಿ ನನಗೆ ಪ್ರಾಶಸ್ತ್ಯ ಕೊಟ್ಟು ಯುವಕರಿಗೆ ಮಣೆ ಹಾಕಬೇಕು. ಯಾವುದೇ ಕಪ್ಪು ಚುಕ್ಕೆ ಇಲ್ಲದ, ಜಾತಿ, ಮತ, ಬೇಧವಿಲ್ಲದ, ಯಾವುದೇ ದೂರುಗಳಿಲ್ಲದ ಸಾರ್ವಜನಿಕ ಜೀವನದಲ್ಲಿ ತೆರೆದಿಟ್ಟ ಪುಸ್ತಕದಂತೆ ಕಾರ್ಯನಿರ್ವಹಿಸಿದ್ದೇನೆ.
    ಅನ್ಯಾಯ, ಅಧರ್ಮ ಕಂಡಾಗ ಯಾವುದೇ ನಿಷ್ಠುರವಿಲ್ಲದೇ ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಸರ್ವ ಜನಾಂಗದವರು ನನ್ನ ಕಾರ್ಯವ್ಯಾಪ್ತಿ ಕ್ಷೇತ್ರದಲ್ಲಿ ನನ್ನನ್ನು ಬೆಂಬಲಿಸುತ್ತಿದ್ದಾರೆ. ಯಾವುದೇ ಜಾತಿ, ಮತ, ಬೇಧ ಇವುಗಳಿಂದ ತುಂಬಾ ದೂರವಾಗಿ ನಾವೇಲ್ಲರೂ ಒಂದೇ ಎಂಬ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ಆದ್ದರಿಂದ ಭಾರತಿಯ ಜನತಾ ಪಕ್ಷದ ವರಿಷ್ಠರುಗಳಾದ ತಾವು ಬರುವ 2018ರ ಚುನಾವಣೆಯಲ್ಲಿ ನನಗೆ ಪ್ರಾಶಸ್ತ್ಯ ಕೊಟ್ಟು ನನ್ನನ್ನು ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯನ್ನಾಗಿಸಬೇಕು ಎಂದು ಪ್ರಕಟಣೆಯ ಮೂಲಕ ಕೋರಿದ್ದೇನೆ.