ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆ

ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆ

ವಿಜಯಪುರ , ಜೂ.10: ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಮಾತ್ರ ಅಭಿವೃದ್ಧಿ ಮಾಡಲಿದ್ದು, ಕುಮಾರಸ್ವಾಮಿಯವರು ಮಾತ್ರ ಅಭಿವೃದ್ಧಿಗೆ ಸಾಕಾರವಾಗಿದ್ದಾರೆ, ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಹರಿದು ಬರುತ್ತಿದ್ದು, ಸ್ವಂತ ಬಲದಿಂದ ಸರ್ಕಾರ ರಚಿಸಲಿದ್ದಾರೆ ಎಂದು ನಾಗಠಾಣದ ಮತಕ್ಷೇತ್ರದ ಜೆಡಿಎಸ್ ಹಿರಿಯ ಮುಖಂಡ ಡಾ. ದೇವಾನಂದ ಚವ್ಹಾಣ ಹೇಳಿದರು.

ನಾಗಠಾಣ ಮತಕ್ಷೇತ್ರದ ಕನ್ನಾಳ ಹಾಗೂ ವಿಜಯಪುರ ವಾರ್ಡ ನಂ 16 ರ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಪ್ರಮುಖವಾಗಿ ಬೇರೂರಿದ್ದು, ಮುಂದಿನ ಚುನಾವಣೆಯಲ್ಲಿ ಇದರ ಪ್ರತಿಫಲ ಸಿಗಲಿದೆ. ಕುಮಾರಸ್ವಾಮಿಯವರು ವಿಜಯಪುರ ಜಿಲ್ಲೆಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸಿದ್ದು ಆನೆ ಬಲ ಬಂದಂತಾಗಿದೆ. ಇದಕ್ಕಾಗಿ ನಿಸ್ವಾರ್ಥದಿಂದ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಗೌರವವಿದೆ ಎಂದರು.

ಇನ್ನೋರ್ವ ಹಿರಿಯ ಜೆಡಿಎಸ್ ಧುರೀಣ ಎಂ ಆರ್ ಪಾಟೀಲ ಬಳ್ಳೊಳ್ಳಿ ಮಾತನಾಡಿ ಮೋದಿಯವರು ಮಾತಿನಲ್ಲಿಯೇ ಅಭಿವೃದ್ಧಿ ಮಂತ್ರ ಜಪಿಸುತ್ತ ವಿದೇಶದಲ್ಲಿ ಶಹಬ್ಬಾಸಗಿರಿ ಪಡೆಯುತ್ತ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಹೇಳಿಕೊಳ್ಳುವಂತ ಅಂದೂ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕೇವಲ ಆಕಸ್ಮಿಕ ಸಿಕ್ಕ ಅಧಿಕಾರದಿಂದ ಕೇವಲ 20 ತಿಂಗಳಲ್ಲಿಯೇ ರಾಜ್ಯ ಅಷ್ಟೆ ಅಲ್ಲ ದೇಶ ನೆನಪಿಡುವ ಅಧಿಕಾರ ನಡೆಸಿರುವ ಕುಮಾರಸ್ವಾಮಿ ಇನ್ನೊಮ್ಮೆ ಈ ರಾಜ್ಯದ ಮುಖ್ಯ ಮಂತ್ರಿಯಾಗುವ ಕನಸು ಜನತೆ ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕಾಗಿ ಪ್ರತಿಯೊಂದು ಸಮೂದಾಯದವರು ಈ ಸಲ ಬೆಂಬಲ ಸೂಚಿಸಿ ಸ್ವಯಂ ಪ್ರೇರಿತರಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಯುವಕರು ಪಕ್ಷದಡೆಗೆ ಬರುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಾಳ ಹಾಗೂ ವಿಜಯಪುರದ ಹಲವಾರು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸುನೀಲ ರಾಠೋಡ, ಕನ್ನಾಳದ ಸದ್ದಾಂ ಚಣೇಗಾಂವ, ಚಂದ್ರಕಾಂತ ಬಜಂತ್ರಿ, ಮಹಿಬೂಬಸಾಬ ಟಕ್ಕೆ, ರಾಘವೇಂದ್ರ ಬನ್ನೇನವರ, ಸುನೀಲಗೌಡ ಬಿರಾದಾರ, ಸಂತೋಷ ಬಿರಾದಾರ, ಹಿದಾಯತ ಹಿಟ್ಟಿನಹಳ್ಳಿ, ಬಶೀರ ಗಚ್ಚಿನಮಹಲ, ಯಾಕೂಬ ಗಚ್ಚಿನಮಹಲ, ಬಾಬುಸಾಬ ದರ್ಗಾ, ರಫೀಕ ಗೀರಗಾಂವ ಇದ್ಧರು.