ವಿದ್ಯುತ್ ಗಾಗಿ ಬಿಜೆಪಿ ಜೆಡಿಎಸ್ ಶಾಸಕರ ಪಾದಯಾತ್ರೆ

ವಿದ್ಯುತ್ ಗಾಗಿ ಬಿಜೆಪಿ ಜೆಡಿಎಸ್ ಶಾಸಕರ ಪಾದಯಾತ್ರೆ

ರಾಯಚೂರು,ನ.30: ನಗರದ ತಾಲೂಕಿಗೆ ನಿರಂತರ 24 ಗಂಟೆ ವಿದ್ಯುತ್ ನೀಡಲು ಆಗ್ರಹಿಸಿ ರಾಯಚೂರಿನ ಜೆಡಿಎಸ್, ಬಿಜೆಪಿ ಶಾಸಕರು ನಡೆಸುತ್ತಿರುವ ಪಾದಯಾತ್ರೆ ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ. ಯರಮರಸ್ ಗ್ರಾಮದಿಂದ ಇಂದು ಪಾದಯಾತ್ರೆ ಆರಂಭಿಸಿರುವ ಜೆಡಿಎಸ್ ಶಾಸಕ ಡಾ.ಶಿವರಾಜ್ ಪಾಟೀಲ್, ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ಆರ್ ಟಿಪಿಎಸ್ ವರೆಗೆ ಪಾದಯಾತ್ರೆ ನಡೆಸಲಿದ್ದಾರೆ.

ಸರ್ಕಾರ ಸ್ಪಂದಿಸಿ ವಿದ್ಯುತ್ ಹಾಗೂ ಭೂಸಂತ್ರಸ್ಥರ ಕಷ್ಟಗಳಿಗೆ ಸ್ಪಂದಿಸಿದಲ್ಲಿ ಹೋರಾಟ ಇಂದು ಅಂತಿಮಗೊಳ್ಳಲಿದೆ. ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಇಬ್ಬರು ಶಾಸಕರು ಎಚ್ಚರಿಕೆ ನೀಡಿದ್ದಾರೆ.