ನಾಳೆ ಡಿ.16 ರಂದು ಜಾಗೃತಿ ಕಾರ್ಯಕ್ರಮ

ನಾಳೆ ಡಿ.16 ರಂದು ಜಾಗೃತಿ ಕಾರ್ಯಕ್ರಮ

ವಿಜಯಪುರ,ಡಿ.15: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ ಹಾಗೂ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕøತಿ ವೇದಿಕೆ ಆಹೇರಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ದಿನಾಂಕ 16-12-2017ರಂದು ಮುಂಜಾನೆ 11 ಗಂಟೆಗೆ ನಗರದ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಅಪರಾದ ತಡೆ ಮಾಸಾಚರಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾದಿಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭಾಕರರಾವ್ ರವರು ಸಮಾರಂಭವನ್ನು ಉದ್ಘಾಟಿಸುವರು. ಎಸ್.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಜಯಶೀಲಾ ವ್ಹಿ. ನಾವದಗಿ ಸಮಾರಂಭದ ಅಧ್ಯಕ್ಷತೆ ವಹಿಸುವರು. 
ಅತಿಥಿಗಳಾಗಿ ಡಿ.ವಾಯ್.ಎಸ್.ಪಿ. ಡಿ. ಅಶೋಕ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಆಯ್.ಎಸ್. ಗಾಳಿ ನಿವೃತ್ತ ಡಿ.ಎಸ್.ಪಿ. ಡಿ.ಪಿ. ಹುಲಸಗುಂದ, ಆಹೇರಿ ಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಭಾಗವಹಿಸುವರು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.