ಹೊಸ ನ್ಯಾಯಬೆಲೆ ಮಂಜೂರಾತಿಗೆ ಅರ್ಜಿ ಆಹ್ವಾನ

ಹೊಸ ನ್ಯಾಯಬೆಲೆ ಮಂಜೂರಾತಿಗೆ ಅರ್ಜಿ ಆಹ್ವಾನ

ಬಾಗಲಕೋಟೆ, ಡಿ.5 : ತಾಲೂಕಿನ ಬೋಡನಾಯಕದಿನ್ನಿ ಗ್ರಾಮದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಿ ನೀಡುವ ಸಲುವಾಗಿ ರಾಜ್ಯ ಅಗತ್ಯ ವಸ್ತುಗಳ ನಿಯಂತ್ರಣ ಆದೇಶ 2016 ಕ್ಲಾಜ್ 6(1)(ಬಿ)()ರ ಪ್ರಕಾರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
     ಕೆ.ಎಫ್.ಸಿ.ಎಸ್.ಸಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಪ್‍ಕಾಮ್ಸ್, ಹಾಲು ಉತ್ಪಾದಕರ ಸಹಕಾರಿ ಸಂಘ, ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತಿಗಳು, ನ್ಯಾಯಬೆಲೆ ಅಂಗಡಿಕಾರರ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದಲ್ಲಿ ನೇರವಾಗಿ ನ್ಯಾಯಬೆಲೆ ಅಂಗಡಿಯನ್ನು ಮಂಜೂರಾತಿ ಮಾಡಲಾಗುವುದು.
    ಅಲ್ಲದೇ ನ್ಯಾಯಬೆಲೆ ಅಂಗಡಿ ಸ್ಥಾಪಿಸಲು ಉದ್ದೇಶಿಸಿದ ಪ್ರದೇಶದಲ್ಲಿರುವ ಸ್ತ್ರೀಶಕ್ತಿ ಗುಂಪು, ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಮಾತ್ರ ನ್ಯಾಯಬೆಲೆ ಅಂಗಡಿಕಾರರಿಗೆ ನೇಮಕಾತಿಗಾಗಿ ಅವಕಾಶವಿರುತ್ತದೆ. ಸದರಿ ಗುಂಪುಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಚಿದ ಮಾನ್ಯತೆ ಪಡೆದಿರಬೇಕು. ವೈಯಕ್ತಿಕ ವ್ಯಕ್ತಿಗಳಿಗೆ ಅವಕಾಶವಿರುವದಿಲ್ಲ. ನಿಗದಿತ ನಮೂನೆ ‘ಎ’ ರಲ್ಲಿ ಅರ್ಜಿಯೊಂದಿಗೆ ಸಂಘದ ನೋಂದಣಿ ಪ್ರಮಾಣ ಪತ್ರ, ಬಾಯಲಾ ಪ್ರತಿ, ಸಂಘದ ಠರಾವು, ಸಂಘದ ಒಚಿದು ವರ್ಷದ ಆಡಿಟ್ ವರದಿ, ಉದ್ದೇಶಿತ ನ್ಯಾಯಬೆಲೆ ಅಂಗಡಿ ಸ್ಥಳದ ಉತಾರೆ ಹಾಗೂ ಇತರೆ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಎರಡು ಪ್ರತಿಯಲ್ಲಿ ಡಿಸೆಂಬರ 30 ರೊಳಗಾಗಿ ಬಾಗಲಕೋಟೆ ತಹಶೀಲ್ದಾರ ಕಚೇರಿಯಲ್ಲಿ ಸಲ್ಲಿಸುವಂತೆ ಆಹಾರ ಇಲಾಖೆ ಪ್ರಕಟಣೆ ತಿಳಿಸಿದೆ.