ಅಂಬೇಡ್ಕರ ಅವರು ದಲಿತರ ಹಿತಕ್ಕಾಗಿ ದುಡಿದವರು : ವಿಠ್ಠಲ ಕಟಕದೋಂಡ

ಅಂಬೇಡ್ಕರ ಅವರು ದಲಿತರ ಹಿತಕ್ಕಾಗಿ ದುಡಿದವರು : ವಿಠ್ಠಲ ಕಟಕದೋಂಡ

ವಿಜಯಪುರ,ಡಿ.6: ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾ ವತಿಯಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ  ಸಂವಿಧಾನಶಿಲ್ಪ ಡಾ.ಬಿ.ಆರ್. ಅಂಬೇಡ್ಕರವರ 61ನೇ ಮಹಾಪರಿನಿರ್ವಾಹಣಾ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ ಮಾತನಾಡಿ, ಅಂಬೇಡ್ಕರವರು 1927 ರಿಂದ 1932ರವರೆಗೆ ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪøಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕಲೆ, ಭಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದವರು.
ಇದರಲ್ಲಿ ನಾಸಿಕನ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕರೆಯ ವಿಷಯವಾಗಿ ಅಸ್ಪøಶ್ಯರನ್ನು ಹೊರಟ್ಟಿರುವರ ವಿರುದ್ದ ಮಾಡಿದ ಆಂದೋಲನಗಳು ಗಮರ್ನಾವಾಗಿವೆ. ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರು. ಬ್ರಿಟಿಷರಿಗೆ ಈ  ವಿಷಯದಲ್ಲಿ ಹಿಂದೂಗಳನ್ನು ಜಾತಿ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾದೆಂಬುದು ಅವರ ನಿಲುವಾಗಿತ್ತು ಎಂದರು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಅಂಬೇಡ್ಕರವರ 61ನೇ ಪರಿನಿರ್ವಾಹ ದಿನವನ್ನು ಆಚರಿಸುತ್ತಿರುವ ನಾವು ಅಂಬೇಡ್ಕರವರು ನಮ್ಮಲ್ಲಿಯೇ ಇದ್ದಾರೆ, ಅವರ ತತ್ವ-ಆದರ್ಶಗಳನ್ನು ಹೋರಾಟದ  ಚಲವನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಅಂಬೇಡ್ಕರವರನ್ನು ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ. ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ªಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಚಿದಾನಂದ ಚಲವಾದಿ, ಎಸ್.ಆರ್. ಶಿವಶರಣ, ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಕವಟಗಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಬಿಜೆಪಿ ನಗರ ಅಧ್ಯಕ್ಷರಾದ ಶಿವರುದ್ರ ಬಾಗಲಕೋಟೆ, ಎಸ್.ಸಿಮೋರ್ಚಾ ನಗರ ಘಟಕದ ಅಧ್ಯಕ್ಷರಾದ ಉಮೇಶ ವೀರಕರ, ದಲಿತ ಮುಖಂಡರಾದ ಅಭಿಷೇಕ ಚಕ್ರವರ್ತಿ, ಹಣಮಂತ ಬಿರಾದಾರ, ಮಹಾನಗರ ಪಾಲಿಕೆ ಸದಸ್ಯ ಗೋಪಾಲ ಘಟಕಾಂಬಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮಖಣಾಪೂರ, ಚಂದ್ರಶೇಖರ ಮ್ಯಾಗೇರಿ ಇನ್ನಿತರರು ಉಪಸ್ಥಿತರಿದ್ದರು.