ಸಮಾನತೆಗಾಗಿ ಅಂಬೇಡ್ಕರ್ ಹಗಲಿರುಳು ಶ್ರಮಿಸಿದರು : ವಿದ್ಯಾಸಾಗರ 

ಸಮಾನತೆಗಾಗಿ ಅಂಬೇಡ್ಕರ್ ಹಗಲಿರುಳು ಶ್ರಮಿಸಿದರು : ವಿದ್ಯಾಸಾಗರ 

ವಿಜಯಪುರ,ಡಿ.6: ಶೋಷಿತ ಸಮುದಾಯಕ್ಕೆ ಮಾನವೀಯ ಹಕ್ಕು ಕೊಡಲು ಹೋರಾಡಿದವರು ಅಂಬೇಡ್ಕರ್. ಅವರು ಎಷ್ಟೋ ಉನ್ನತ ಹುದ್ದೆಗಳನ್ನು ತಿರಸ್ಕರಿಸಿ ಸಮಾಜದಲ್ಲಿ ಸಮಾನತೆಯನ್ನು ತರಲು ಹಗಲಿರುಳು ಶ್ರಮಿಸಿದರು ಎಂದು ಕಲಬುರಗಿಯ ಡಾ.ಬಿ.ಆರ್. ಅಂಬೇಡ್ಕರ್ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಐ.ಎಸ್. ವಿದ್ಯಾಸಾಗರ ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿ ಪ.ಜಾ./ಪ.ಪಂ. ಘಟಕ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 61ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬುದ್ಧ ಭಾರತ ನಿರ್ಮಾಣದ ಸಂಕಲ್ಪ ದಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಅವರು ಮಾತನಾಡಿದರು. 
ಅಂಬೇಡ್ಕರ್ ಅವರು ಅಸ್ಪøಶ್ಯತೆಯನ್ನು ಕೇಳಿ ತಿಳಿದವರಲ್ಲ, ಅನುಭವಿಸಿ ತಿಳಿದವರಾಗಿದ್ದರು. ಬೇರೆಯವರಿಗೆ ಅದರ ಪ್ರಖರತೆ ತಿಳಿಯುವುದಿಲ್ಲ ಎಂದರು.
ಒಂದು ಕಡೆ ಹೆಣ್ಣನ್ನು ದೇವತೆ ಎನ್ನುತ್ತಾರೆ, ಇನ್ನೊಂದೆಡೆ ಅವಳನ್ನು ಭೋಗದ ವಸ್ತು ಎಂದು ಹೇಳುತ್ತಾರೆ. ಆದರೆ ಹೆಣ್ಣು ಸ್ವತಂತ್ರ ಜೀವ ಎಂದು ಯಾರೂ ಹೇಳಲಿಲ್ಲ. ಆದರೆ ಅಂಬೇಡ್ಕರ್ ಕೇವಲ ಅಸ್ಪøಶ್ಯರಿಗಾಗಿ ಅಲ್ಲದೇ ಮಹಿಳೆಯರಿಗಾಗಿಯೂ ಹೋರಾಟ ಮಾಡಿದ್ದಾರೆ. ಮಹಿಳೆಯರಿಗೆ ಹೆರಿಗೆ ರಜೆ ಮತ್ತು ಭತ್ಯೆಗಾಗಿ ಹೋರಾಡಿದ ಮೊದಲ ಭಾರತೀಯ ಅಂಬೇಡ್ಕರ್‍ರವರಾಗಿದ್ದಾರೆ ಎಂದು ತಿಳಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಸಚಿವ ಪ್ರೊ.ಎಲ್.ಆರ್. ನಾಯಕ ಮಾತನಾಡಿ, ದೇಶ ಪ್ರಬುದ್ಧವಾಗಬೇಕಾದರೆ ಮಹಿಳೆಯರಿಂದಲೇ ಸಾಧ್ಯವಾಗಬೇಕು. ಬದಲಾವಣೆ ಆಗಬೇಕಾದರೆ ಅದು ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ವಿದ್ಯಾರ್ಥಿನಿಯರಿಗೆ ಹೇಳಿದರು.
ಭಾರತ ಬಡರಾಷ್ಟ್ರ ಆದರೆ ವೈಜ್ಞಾನಿಕವಾಗಿ ನೋಡಿದರೆ ನಮ್ಮಷ್ಟು ಶ್ರೀಮಂತ ರಾಷ್ಟ್ರ ಯಾವುದು ಇಲ್ಲ ಎಂದರು.    
ಈ ಸಂದರ್ಭದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಬುದ್ಧವಂದನೆ ಮಾಡಿದರು. ಪ.ಜಾ/ಪ.ಪಂ ಘಟಕದ ನಿರ್ದೇಶಕ ಡಾ. ಸಕ್ಪಾಲ್ ಹೂವಣ್ಣ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಸಾವಿತ್ರಿ ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿನಿ ಭುವನೇಶ್ವರಿ ಕಾಂಬಳೆ ನಿರೂಪಿಸಿದರು. ಅರ್ಶಿಯಾ ಕೊಟ್ನಾಳ ವಂದಿಸಿದರು.