ವಾರ್ಷಿಕ ಆಯವ್ಯಯ ತಯಾರಿಕೆಗೆ ಸಾರ್ವಜನಿಕರಿಂದ ಸಲಹೆ ನಗರಸಭೆ 

ವಾರ್ಷಿಕ ಆಯವ್ಯಯ ತಯಾರಿಕೆಗೆ ಸಾರ್ವಜನಿಕರಿಂದ ಸಲಹೆ ನಗರಸಭೆ 

ಬಾಗಲಕೋಟೆ, ಡಿ.4 : ಬಾಗಲಕೋಟ ನಗರಸಭೆಯ 2018-17ನೇ ಸಾಲಿನ ಆಯವ್ಯಯ ತಯಾರಿಸಲು ಅಭಿವೃದ್ದಿ ಯೋಜನೆಗಳ ಕುರಿತು ನಗರದ ಗಣ್ಯವ್ಯಕ್ತಿಗಳು ಪದಾಧಿಕಾರಿಗಳು, ವರ್ತಕರು, ನಿವೃತ್ತ ಅಧಿಕಾರಿಗಳು, ನೌಕರರು, ಪತ್ರಕರ್ತರು, ಹಿರಿಯ ನಾಗರಿಕರು, ಸಾರ್ವಜನಿಕರುಗಳ ಸಲಹೆ ಸೂಚನೆಗಳನ್ನು ಪಡೆಯಲು ಡಿಸೆಂಬರ 6 ರಂದು ಬೆಳಿಗ್ಗೆ 11.30 ಗಂಟೆಗೆ ನಗರಸಭೆ ಆವರಣದ ಸಭಾಭವನದಲ್ಲಿ ಅಧ್ಯಕ್ಷರ ಸಮ್ಮುಖದಲ್ಲಿ ಮೊದಲೇ ಸುತ್ತಿನ ಆಯವ್ಯಯ ಮಂಡನೆ ಪೂರ್ವಭಾವಿ ಸಾರ್ವಜನಿಕರ ಸಭೆಯನ್ನು ಕರೆಯಲಾಗಿದ್ದು, ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆಗಳನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ಕೊಡುವಂತೆ ನಗರಸಭೆಯ ಅಧ್ಯಕ್ಷರು ಹಾಗೂ ಪೌರಾಯಕ್ತರು ಜಂಟಿಯಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.