ಅಸೈಗೋಳಿಯ ಅಭಯಾಶ್ರಮದಲ್ಲಿ ರ೦ಗ ತರಬೇತಿ ಶಿಬಿರ

ಅಸೈಗೋಳಿಯ ಅಭಯಾಶ್ರಮದಲ್ಲಿ ರ೦ಗ ತರಬೇತಿ ಶಿಬಿರ

ಮ೦ಗಳೂರು,4 : ಜೀವನದಲ್ಲಿ ಅಸಾಧ್ಯವಾದದ್ದನ್ನು ಸಾಧಿಸುವ ಬಗ್ಗೆ ಕನಸು ಕಂಡವರು ಮಾತ್ರ ಸಾಧಕರಾಗುತ್ತಾರೆ ಅಸಾಧ್ಯವಾದುದ್ದನ್ನು ಅದಮ್ಯವಾಗಿ ಪ್ರೀತಿಸಿ, ಅದರ ಸಾಕಾರಕ್ಕಾಗಿ ಪ್ರಯತ್ನಿಸಿ, ಗೆಲವು ನಿಮ್ಮನ್ನು ಅರಸಿ ಬರುತ್ತದೆ’ ಜೀವನದಲ್ಲಿ ಗುರಿ ಮುಖ್ಯ. ಜತೆಗೆ ಅದನ್ನು ಸಾಧಿಸುವ ಛಲವೂ ಇರಬೇಕು. ಕಷ್ಟವಾಗುತ್ತದೆ ಅಥವಾ ನನ್ನಿಂದ ಸಾಧ್ಯವಿಲ್ಲ ಎಂದುಕೊಂಡರೆ ಯಾವುದೂ ಸಾಧ್ಯವಿಲ್ಲ.ಏನನ್ನಾದರೂ ಸಾಧಿಸಬೇಕೆಂದು ಪ್ರತಿಯೊಬ್ಬರೂ ಕನಸು ಕಂಡಿರುತ್ತಾರೆ. ಆದರೆ ಅದನ್ನು ನನಸಾಗಿಸಿಕೊಳ್ಳುವವರು ಮಾತ್ರ ವಿರಳ! ಕನಸು ನನಸಾಗಬೇಕೆಂದರೆ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ.. ಅದಕ್ಕೆ ಸಮಯ ಬೇಕು. ಅದೇ ರೀತಿ ಗುರಿ ತಲುಪಬೇಕಾದರೆ ಕೆಲ ತ್ಯಾಗವನ್ನೂ ಮಾಡಬೇಕಾಗುತ್ತದೆ.ಏ೦ದು ಖ್ಯಾತ ನಿರೂಪಕಿ, ಬಾಲನಟಿ ಕುಮಾರಿ ವಿ.ಜೆ.ಪೂರ್ವಿಕ ರಾವ್, ಅವರು ಪುಣ್ಯಭೂಮಿ ತುಳುನಾಡ ಸೇವಾ ಫೌ೦ಡೇಷನ್, ಮ೦ಗಳೂರು, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ, ಅರೆಹೊಳೆ ಪ್ರತಿಷ್ಟಾನ (ರಿ) ಮ೦ಗಳೂರು ಇವರ ಆಶ್ರಯದಲ್ಲಿ ಅಸೈಗೋಳಿ ಅಭಯಾಶ್ರದಲ್ಲಿ ಮಕ್ಕಳ ದಿನಾಚರಣೆಯ ಅ೦ಗವಾಗಿ ನಡೆಸಿದ ರ೦ಗತರಬೇತಿ ಶಿಬಿರವನ್ನು ಉದ್ಘಾಟನಾ ಸ೦ದರ್ಭದಲ್ಲಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಹೀಲ್ಸ್ ಮ೦ಗಳೂರು ಇದರ ಉಪಾಧ್ಯಕ್ಷ, ಹಾಗೂ ತುಳುನಾಡ ಸೇವಾ ಫೌ೦ಡೇಶನ್ ಮ೦ಗಳೂರಿನ ಸದಸ್ಯರಾದ ಶ್ರೀ ಅಜಿತ್ ಪೂಜಾರಿ, ತುಳುನಾಡ ಸೇವಾ ಫೌ೦ಡೇಶನ್ ಮ೦ಗಳೂರಿನ ಮುಖ್ಯಸ್ಥರಾದ ಶ್ರೀ ರಮೇಶ್ ಕುಮಾರ್, ಅರೆಹೊಳೆ ಪ್ರತಿಷ್ಟಾನ ಮ೦ಗಳೂರಿನ ಅಧ್ಯಕ್ಷರಾದ ಶ್ರೀ ಅರೆಹೊಳೆ ಸದಾಶಿವ್ ರಾವ್, ರೋಟರಿ ಸಮುದಾಯದಳದ ಅಧ್ಯಕ್ಷರಾದ ಶ್ರೀ ಯೋಗಿಶ್ ಕುಮಾರ್ ಗಟ್ಟಿ, ಅಭಯಾಶ್ರಮದ ಮುಖ್ಯಸ್ಥರಾದ ಶ್ರೀ ಶ್ರೀನಾಥ ಹೆಗಡೆಯವರು ಉಪಸ್ಥಿತರಿದ್ದರು.