ಅಲೆಮಾರಿ-ಅರೆಅಲೆಮಾರಿ ಸಮುದಾಯಗಳ ನೌಕರರ ಸಭೆ

ಅಲೆಮಾರಿ-ಅರೆಅಲೆಮಾರಿ ಸಮುದಾಯಗಳ ನೌಕರರ ಸಭೆ

ವಿಜಯಪುರ,ಅ.16 : ವಿಜಯಪುರ ಜಿಲ್ಲೆಯ ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯಗಳ ನೌಕರರ ಸಭೆ ನಗರದ ವಿಜಯಪುರ ಜಿಲ್ಲೆಯಲ್ಲಿ ಶೀಘ್ರವೇ ಅಲೆಮಾರಿ-ಅರೆಅಲೆಮಾರಿ ನೌಕರರ ಸಂಘ ಸ್ಥಾಪನೆ ಮಾಡುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಅಲೆಮಾರಿ-ಅರೆಅಲೆಮಾರಿ ನೌಕರರ ಸಂಘ ಸ್ಥಾಪನೆಗಾಗಿ ಇದೇ ದಿ. 19 ರಂದು ಮತ್ತೊಮ್ಮೆ ಸಭೆ ಸೇರಲು ನಿರ್ಧರಿಸಲಾಯಿತು. ಅಂದಿನ ಸಭೆಯಲ್ಲಿ ಜಿಲ್ಲೆಯ ಅಲೆಮಾರಿ-ಅರೆಅಲೆಮಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಯಿತು.
ನಿರ್ವಾಹಕ ಶರಣಪ್ಪ ಹೆಳವರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹೆಳವ ಸಮಾಜದ ಅಧ್ಯಕ್ಷ ಬಾಬು ಹೆಳವರ, ಗೋಂಧಳಿ ಸಮಾಜದ ಸದಾಶಿವ ಗೋಂಧಳಿ, ಶಿಕ್ಷಕರಾದ ಮಹಾಂತೇಶ ಹೆಳವರ, ಸಿದ್ದು ಹೆಳವರ, ಪ್ರಕಾಶ ಗೋಂಧಳಿ, ಸಂಗಮೇಶ ಹೆಳವರ, ಸಿದ್ದಣ್ಣ ಹೆಳವರ, ಬಸವರಾಜ ಹೆಳವರ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.