ತುಮಕೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ಉದ್ಯೋಗ

ತುಮಕೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ಉದ್ಯೋಗ

ತುಮಕೂರು :ತುಮಕೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಆಡಳಿತ ವಿಭಾಗ)ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರರು ಸೇರಿದಂತೆ 52 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ: ಶೀಘ್ರಲಿಪಿಗಾರರು-20 ಹುದ್ದೆ, ಬೆರಳಚ್ಚುಗಾರರು-6 ಹುದ್ದೆ, ಬೆರಳಚ್ಚು ನಕಲುಗಾರರು-2 ಹುದ್ದೆ, ಜಾರಿಪೇದೆ-11 ಹುದ್ದೆ ಮತ್ತು ಸೇವಕ 13 ಹುದ್ದೆಗಳು ಖಾಲಿ ಇವೆ. ಅರ್ಹತೆಗಳೇನು? ಈ ಎಲ್ಲಾ ಹುದ್ದೆಗಳಿಗೂ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಶಿಕ್ಷಣ ಕಡ್ಡಾಯ. ಅದರ ಜೊತೆಗೆ ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಾದರೆ ಅರ್ಜಿ ಸಲ್ಲಿಸಬೇಕಾದರೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಆಂಗ್ಲ ಹಾಗೂ ಕನ್ನಡ ಭಾಷೆಗಳ ಹಿರಿಯ ಶ್ರೇಣಿಯ ಶೀಘ್ರಲಿಪಿ ಮತ್ತು ಆಂಗ್ಲ ಕನ್ನಡ ಭಾಷೆಗಳ ಹಿರಿಯ ಶ್ರೇಣಿಯ ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು. ಬೆರಳಚ್ಚು ನಕಲುಗಾರರು ಹುದ್ದೆಗೆ ಅರ್ಜಿ ಸಲ್ಲಿಸುವವರು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಆಂಗ್ಲ ಕನ್ನಡ ಭಾಷೆಗಳ ಕಿರಿಯ ಶ್ರೇಣಿಯ ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು. ಇನ್ನು ಜಾರಿಪೇದೆ ಹುದ್ದೆಗಾದರೆ ನಿಗದಿತ ವಿದ್ಯಾರ್ಹತೆ ಜೊತೆಗೆ ಕನ್ನಡ ಓದಲು ಮತ್ತು ಬರೆಯಲು ಬರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲಘು ವಾಹನ ಚಾಲನಾ ಪರವಾನಗಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಜಾರಿಪೇದೆಗಳಾಗಬಹುದು. ಇನ್ನು ಸೇವಕ ಹುದ್ದೆಗೆ ಅರ್ಜಿ ಸಲ್ಲಿಸುವವರು 7ನೇ ತರಗತಿ ತೇರ್ಗಡೆಯಾಗಿರಬೇಕು. ಕನ್ನಡ ಬರೆಯಲು ಮತ್ತು ಓದಲು ತಿಳಿದಿರಬೇಕು. ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ. ಇನ್ನು ಸಾಮಾನ್ಯ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ಮೀರಿರಬಾರದು. ಅರ್ಜಿ ನಮೂನೆಯನ್ನು ಇ-ಕೋರ್ಟ್‌ ತುಮಕೂರು ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಫೆಬ್ರವರಿ 2ರೊಳಗೆ ಕಳುಹಿಸಬೇಕಾದ ವಿಳಾಸ: ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು.ಫೆ.2ರೊಳಗೆ ಅರ್ಜಿ ಸಲ್ಲಿಸಿ -ಅಂಚೆ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.