ಉದ್ಯಮಶೀಲತಾ ಅಭಿವೃದ್ದಿ ತರಬೇತಿಗೆ ಅರ್ಜಿ

ಉದ್ಯಮಶೀಲತಾ ಅಭಿವೃದ್ದಿ ತರಬೇತಿಗೆ ಅರ್ಜಿ

ಬಾಗಲಕೋಟೆ ಜೂ.17: ಧಾರವಾಢ ಸಿಡಾಕ್ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ ಹಾಗು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಮೂರು ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಇಲಕಲ್ಲದಲ್ಲಿ ಹಮ್ಮಿಕೊಳ್ಳಲಾಗಿದೆ.
    ತರಬೇತಿಯಲ್ಲಿ ಸ್ವಂತ ಉದ್ಯಮ ಸ್ಥಾಪಿಸುವ ವಿದಾನ, ಮಾರುಕಟ್ಟೆ ಸಮೀಕ್ಷೆ, ಬ್ಯಾಂಕ್ ಮತ್ತು ಕೈಗಾರಿಕಾ ಇಲಾಖೆಯ ಸಹಾಯ, ಯೋಜನಾ ವರದಿ ತಯಾರಿಸುವ ವಿಧಾನ ಹಾಗೂ ಉದ್ಯಮದ ನಿರ್ವಹಣೆಯ ಮಾಹಿತಿಯನ್ನು ಪರಿಣಿತರಿಂದ ನೀಡಲಾಗುತ್ತದೆ.

ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವ 20 ರಿಂದ 35 ವಯಸ್ಸಿನ ಎಸ್.ಎಸ್.ಎಲ್.ಸಿ ಪಾಸಾದ ಯುವಕ, ಯುವತಿಯರು ತಮ್ಮ ಹೆಸರು, ವಿಳಾಸ, ವಯಸ್ಸು, ಶಿಕ್ಷಣ, ದೂರವಾಣಿ ಸಂಖ್ಯೆ, ಜಾತಿ ವಿವರಗಳನ್ನು ಮೊನಂ.9901158488ಗೆ ಜೂನ್ 20 ರೊಳಗಾಗಿ ಎಸ್ಎಂ ಎಸ್ ಮೂಲಕ ಕಳುಹಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.