ಹಡಗುಕಟ್ಟೆಯಲ್ಲಿ ಮಗುಚಿದ ಯುದ್ಧನೌಕೆ

ಹಡಗುಕಟ್ಟೆಯಲ್ಲಿ ಮಗುಚಿದ ಯುದ್ಧನೌಕೆ

ಮುಂಬೈ: ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‍‌ಎಸ್ ಬೆಟ್ವಾ ಮುಂಬೈ ಹಡಗು ಕಟ್ಟೆಯಲ್ಲಿ ಮಗುಚಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಇಂದು ಮಧ್ಯಾಹ್ನ 1.50ಕ್ಕೆ ಈ ಘಟನೆ ಸಂಭವಿಸಿದೆ.

ಸಣ್ಣ ಪುಟ್ಟ ದುರಸ್ತಿ ಕಾರ್ಯಗಳ ನಂತರ ಸಮುದ್ರಕ್ಕೆ ಇಳಿದಾಗ ಬೆಟ್ವಾ ಸಮರ ನೌಕೆ ಒಂದು ಭಾಗಕ್ಕೆ ಸರಿದು ಮಗುಚಿದೆ ಎಂದು ಹೇಳಲಾಗಿದೆ,
ಡಾಕ್ ಬ್ಲಾಕ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದೇ ಈ ಘಟನೆಗೆ ಕಾರಣ.

ನೌಕೆಯಲ್ಲಿದ್ದ 14 ಮಂದಿ ನಾವಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇನ್ನು ಇಬ್ಬರು ನಾವಿಕರು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ  ಮುಂದುವರಿದಿದೆ.

ಸ್ವದೇಶಿ ನಿರ್ಮಿತ ನೌಕೆಯಾಗಿರುವ ಬೆಟ್ವಾ 3850 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿದೆ.

ಪಶ್ಚಿಮ ನೌಕಾ ಪಡೆಯಲ್ಲಿ ಉರಾನ್  ನೌಕಾ- ವಿರೋಧಿ ಕ್ಷಿಪಣಿ ಮತ್ತು ಭೂಮಿಯಿಂದ ಬಾನಿಗೆ ನೆಗೆಯುವ ಏರ್ ಮಿಸೈಲ್ ಹೊಂದಿರುವ ನೌಕೆಯಾಗಿದೆ ಇದು.