ಪ್ರಮುಖ ಖಾತೆಗಳಾದ ಗೃಹ, ಹಣಕಾಸು ಮತ್ತು ನಗರಾಭಿವೃದ್ಧಿ ಖಾತೆ ಉಳಿಸಿಕೊಂಡ ಸಿಎಂ ಯೋಗಿ

ಪ್ರಮುಖ ಖಾತೆಗಳಾದ ಗೃಹ, ಹಣಕಾಸು ಮತ್ತು ನಗರಾಭಿವೃದ್ಧಿ ಖಾತೆ ಉಳಿಸಿಕೊಂಡ ಸಿಎಂ ಯೋಗಿ

ಲಖನೌ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ತಮ್ಮ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಗಳಾದ ಗೃಹ, ಹಣಕಾಸು ಮತ್ತು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಪಿಡಬ್ಲ್ಯೂಡಿ ಹಾಗೂ ದಿನೇಶ್ ಸಿಂಗ್ ಅವರಿಗೆ ಶಿಕ್ಷಣ ಖಾತೆಯನ್ನು ನೀಡಲಾಗಿದೆ. ಗೃಹ ಖಾತೆಗಾಗಿ ಈ ಇಬ್ಬರು ಉಪ ಮುಖ್ಯಮಂತ್ರಿಗಳು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಗೃಹ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಯೋಗಿ ಸಂಪುಟದ ಸಚಿವರು ಹಾಗೂ ಖಾತೆಗಳು

ಸುರೇಶ್ ಖನ್ನಾ - ಸಂಸದೀಯ ವ್ಯವಹಾರ

ಸತೀಶ್ ಮೋಹನ್ - ಕೈಗಾರಿಕೆ

ಸ್ವಾಮಿ ಪ್ರಸಾದ್ ಮೌರ್ಯ - ಕಾರ್ಮಿಕ ಮತ್ತು ಉದ್ಯೋಗ

ರಿಟಾ ಬಹುಗುಣ ಜೋಶಿ - ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ, ಪ್ರವಾಸೋದ್ಯಮ

ಶ್ರೀಕಾಂತ್ ಶರ್ಮಾ - ಇಂಧನ

ಸಿದ್ದಾರ್ಥನಾಥ್ ಸಿಂಗ್ - ಆರೋಗ್ಯ

ಸುರೇಶ್ ರಾಣಾ - ಸಕ್ಕರೆ