ಟಾಟಾ ತರಬೇತಿ : ಟಾಟಾ ಮೋಟಾರ್ಸ್‌

ಟಾಟಾ ತರಬೇತಿ : ಟಾಟಾ ಮೋಟಾರ್ಸ್‌

ಬೆಂಗಳೂರು: ದೇಶದಲ್ಲಿ ಟ್ರಕ್‌ ರೇಸಿಂಗ್‌ನ ಜನಪ್ರಿಯತೆ ಹಬ್ಬಿಸಲು ಮುಂದಾಗಿರುವ ಟಾಟಾ ಮೋಟಾರ್ಸ್‌ ಸಂಸ್ಥೆಯು, ರೇಸ್‌ನಲ್ಲಿ ದೇಶಿ ಪ್ರತಿಭೆಗಳನ್ನು ತರುವ ಉದ್ದೇಶದಿಂದ ಎರಡನೇ ಆವೃತ್ತಿಯ ತರಬೇತಿ ಕಾರ್ಯಕ್ರಮ ಆರಂಭಿಸಿದೆ. ಟಾಟಾ ಮೋಟಾರ್ಸ್‌ ಈಗಾಗಲೆ ಮೂರು ಆವೃತ್ತಿಯ ಟ್ರಕ್‌ ರೇಸ್‌ಗಳನ್ನು ಭಾರತದಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದು, ಕಳೆದ ಬಾರಿಯ ವಿಶೇಷ ಎಂಬಂತೆ ಸ್ಥಳೀಯ ಟ್ರಕ್‌ ಡ್ರೈವರ್‌ಗಳ ಪ್ರತ್ಯೇಕ ರೇಸ್‌ ನಡೆಸಲಾಗಿತ್ತು. ಈ ಯಶಸ್ಸನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಉದ್ದೇಶದಿಂದ, ಟಾಟಾ ಮೋಟಾರ್ಸ್‌ ಹೆಚ್ಚು ಹೆಚ್ಚು ಸ್ಥಳೀಯ ಚಾಲಕರಿಗೆ ರೇಸರ್‌ಗಳಾಗುವ ಅವಕಾಶ ಕಲ್ಪಿಸಲು ಮುಂದಾಗಿದೆ.

ತರಬೇತಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ಟ್ರಕ್‌ ಚಾಲಕರು, ಗ್ರೇಟರ್‌ ನೊಯ್ಡಾದ ಫಾರ್ಮುಲಾ 1 ಟ್ರ್ಯಾಕ್‌ ಬುದ್ಧ ಅಂತಾರಾಷ್ಟ್ರೀಯ ಸರ್ಕಿಟ್‌ನಲ್ಲಿ ನಡೆಯಲಿರುವ ನಾಲ್ಕನೇ ಆವೃತ್ತಿಯ ಟಾಟಾ ಪ್ರೈಮಾ ಟಿ-1 ಟ್ರಕ್‌ ರೇಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಳ್ಳಲ್ಲಿದ್ದಾರೆ.