ಜೈಲಿನಲ್ಲಿರುವ ಸಲ್ಮಾನ್ ಖಾನ್ ಅರ್ಧದಷ್ಟು ಚಲನಚಿತ್ರ ಸಿನಿಮಾಗಳನ್ನು ಹೊಂದಿದೆ

ಜೈಲಿನಲ್ಲಿರುವ ಸಲ್ಮಾನ್ ಖಾನ್ ಅರ್ಧದಷ್ಟು ಚಲನಚಿತ್ರ ಸಿನಿಮಾಗಳನ್ನು ಹೊಂದಿದೆ

ಕೃಷ್ಣಮೃಗ ಬೇಟೆಯಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಟ ಸಲ್ಮಾನ್​ ಖಾನ್​ಗೆ ಐದು ವರ್ಷ ಶಿಕ್ಷೆ ನಿಗದಿಯಾಗಿದ್ದು ಜೋಧಪುರ ಸೆಂಟ್ರಲ್​ ಜೈಲ್​ ಸೇರಿದ್ದಾರೆ.

ಅತ್ಯಾಚಾರ ಆರೋಪದಡಿ ಜೈಲಿನಲ್ಲಿರೋ ಅಸಾರಾಮ್​ ಬಾಪು ಇರೋ ಬಿಗಿಭದ್ರತೆಯ ವಾರ್ಡ್​​ನ 2ನೇ ಬ್ಯಾರಕ್​​ನಲ್ಲಿ ಸಲ್ಮಾನ್​ ಸೆರೆವಾಸ ಅನುಭವಿಸಲಿದ್ದಾರೆ. ಇಲ್ಲಿ ಸಲ್ಮಾನ್​ಗೆ ಯಾವುದೇ ವಿಶೇಷ ಸೌಲಭ್ಯಗಳನ್ನೂ ನೀಡಲಾಗದು. ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಲಾಗುವುದು. ಹೊರಗಿನ ಆಹಾರಕ್ಕೆ ಅವಕಾಶವಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ನಟರಾದ ಸೈಫ್​ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ನೀಲಮ್​ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಲಾಗಿದೆ. ಸಲ್ಮಾನ್​ ಖಾನ್​ ಶುಕ್ರವಾರ ಬೆಳಗ್ಗೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.