ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು: ಐಪಿಸಿ ಸೆಕ್ಷನ್ 377 ರದ್ದು ಗೊಳಿಸಿ ಸುಪ್ರೀಂ ಕೋರ್ಟ್ ಹೇಳಿಕೆ

ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು: ಐಪಿಸಿ ಸೆಕ್ಷನ್ 377 ರದ್ದು ಗೊಳಿಸಿ ಸುಪ್ರೀಂ ಕೋರ್ಟ್ ಹೇಳಿಕೆ

ನವದೆಹಲಿ: ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು ಎಂದು ಹೇಳುವ ಮೂಲಕ ಸಲಿಂಗ ಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಸಲಿಂಗಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಸಲಿಂಗ ಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಇಂದು ನಡೆದ ವಿಚಾರಣೆಯಲ್ಲಿ ತನ್ನ ಅಂತಿಮ ತೀರ್ವು ನೀಡಿದ ಸುಪ್ರೀಂ ಕೋರ್ಟ್, ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು. ಇಷ್ಟು ದಿನ ಅವರ ಹಕ್ಕನ್ನು ಕಸಿಯಲಾಗಿತ್ತು. ಲೈಂಗಿಕ ದೃಷ್ಟಿಕೋನ ವೈಯುಕ್ತಿಕ ನೈಸರ್ಗಿಕ ಹಕ್ಕಾಗಿದ್ದು, ಅದರ ನಿರ್ಬಂಧ ಅಥವಾ ತಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದಂತೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.