ತಮ್ಮ ಹೆಸರಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಗರಂ ಆದ ನಟ ಧ್ರುವ ಸರ್ಜಾ

ತಮ್ಮ ಹೆಸರಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಗರಂ ಆದ ನಟ ಧ್ರುವ ಸರ್ಜಾ

ಬೆಂಗಳೂರು : ತಮ್ಮ ಹೆಸರಲ್ಲಿ ಫೇಸ್ ಬುಕ್ ಹಾಗೂ ಇನ್​​ಸ್ಟಾಗ್ರಾಂನಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿ ದುರಪಯೋಗ ಪಡಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಇದೀಗ ಸ್ಯಾಂಡಲ್ ​ವುಡ್ ​ನ ಆಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಅವರು ಗರಂ ಆಗಿದ್ದಾರೆ. 

ನಟ ಧ್ರುವ ಸರ್ಜಾ ಅವರು ಇದೂವರೆಗೆ ಫೇಸ್​ಬುಕ್​ ಆಗಲೀ, ಇನ್​​ಸ್ಟಾಗ್ರಾಂನಲ್ಲಾಗಲೀ ಯಾವುದೇ ಖಾತೆ ತೆರೆದಿಲ್ಲ. ಆದರೂ ಅವರ ಹೆಸರಲ್ಲಿ ಯಾರೋ ಕಿಡಿಗೇಡಿಗಳು ನಕಲಿ ಖಾತೆ ಕ್ರಿಯೆಟ್ ಮಾಡಿ ಕಂಡ ಕಂಡೋರಿಗೆ ಅಶ್ಲೀಲ ಮೆಸೇಜ್​ ಮಾಡ್ತಿದ್ದಾರಂತೆ.
ಇದನ್ನು ತಿಳಿದ ಧ್ರುವ, ಅವರು ತಮ್ಮ ಟ್ವಿಟ್ಟರ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ನನ್ನ ಹೆಸರಿನ ಯಾವುದೇ ಫೇಸ್​ಬುಕ್​, ಇನ್​ಸ್ಟಾಗ್ರಾಂ ಖಾತೆಗಳಿಲ್ಲ. ಹೆಸರಿನಲ್ಲಿರೋ ನಕಲಿ ಖಾತೆಗಳಿಂದ ಅನ್ ​ಫಾಲೋ ಮಾಡಿ. ಅಲ್ಲದೇ, ಮತ್ತೆ ಇಂತಹ ಮೆಸೇಜ್​ಗಳು ರಿಪೀಟ್ ಆದಲ್ಲಿ ಸೈಬರ್​ ಕ್ರೈಂಗೆ ದೂರು ನೀಡಿ ಅಂತಾ ಅಭಿಮಾನಿಗಳಲ್ಲಿ ಧ್ರುವ ಮನವಿ ಮಾಡಿದ್ದಾರೆ.