ಭ್ರಷ್ಟ ಸರ್ಕಾರ ಆಮ್‍ ಆದ್ಮಿ ಪಕ್ಷ

ಭ್ರಷ್ಟ ಸರ್ಕಾರ ಆಮ್‍ ಆದ್ಮಿ ಪಕ್ಷ

ನವದೆಹಲಿ :  ರಾಮಲೀಲಾ ಮೈದಾನದಲ್ಲಿ ರ‍್ಯಾಲಿ ಹಮ್ಮಿಕೊಂಡಿದ ಬಿಜೆಪಿ . ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಈ ಹಿಂದೆ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳಿಗಿಂತ ಆಮ್ ಆದ್ಮಿ ಪಕ್ಷ ಸರ್ಕಾರವೇ ಹೆಚ್ಚು ಭ್ರಷ್ಟ ಸರ್ಕಾರ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷ ಉತ್ತಮ ರೀತಿಯಲ್ಲಿ ಅಧಿಕಾರ ನಡೆಸಬಹುದು ಎಂದು ದೆಹಲಿ ಜನರು ಆ ಪಕ್ಷಕ್ಕೆ ಮತ ನೀಡಿದ್ದರು. ಆದರೆ ಇಷ್ಟೊಂದು ಕಡಿಮೆ ಅವಧಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರವನ್ನು ಯಾವುದೇ ಪಕ್ಷಗಳು ಮಾಡಿಲ್ಲ. ದೆಹಲಿ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ರಾಜಕೀಯ ಗುದ್ದಾಟವನ್ನು ನಿಲ್ಲಿಸಿದರೆ ಮಾತ್ರ ದೆಹಲಿಯಲ್ಲಿ ಅಭಿವೃದ್ಧಿ ಸಾಧ್ಯ ಎಂದು ಅಮಿತ್ ಶಾ ಹೇಳಿದ್ದಾರೆ. ನಾವೀಗ ಐದು ರಾಜ್ಯಗಳಲ್ಲಿ ಚುನಾವಣೆ ಗೆದ್ದಿದ್ದೇವೆ. ದೆಹಲಿಯ ಜನರು ಈ ಐದು ರಾಜ್ಯಗಳ ಜನರ ಮಾತನ್ನು ಕೇಳಬೇಕಿದೆ ಎಂದು ಹೇಳಿದ ಶಾ, ಆಪ್ ಸರ್ಕಾರ ತಮಿಳುನಾಡು, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ  ಜಾಹೀರಾತುಗಳನ್ನು ನೀಡಿ ಹಣ ವ್ಯರ್ಥ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.  ಎಂಸಿಡಿ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿದ ಶಾ, ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡುವ ಮೂಲಕ ಮಾಡಿದ ತಪ್ಪನ್ನು ದೆಹಲಿ ಜನತೆ ಎಂಸಿಡಿ ಚುನಾವಣೆಯಲ್ಲಿ ಮಾಡುವುದು ಬೇಡ ಎಂದಿದ್ದಾರೆ.