ನೀರು, ಪ್ರಸಾದದಲ್ಲಿ ವಿಷ ಬೇರಿಸಿ ಕೊಲ್ಲುವ ಯತ್ನದಲ್ಲಿ ಉಗ್ರರು

ನೀರು, ಪ್ರಸಾದದಲ್ಲಿ ವಿಷ ಬೇರಿಸಿ ಕೊಲ್ಲುವ ಯತ್ನದಲ್ಲಿ ಉಗ್ರರು

ತ್ರಿಶೂರ್,ನ.28: ನೀರು, ಪ್ರಸಾದದಲ್ಲಿ ವಿಷ ಬೆರೆಸಿ ಅಯ್ಯಪ್ಪ ಮಾಲಾಧಾರಿಗಳ ಹತ್ಯೆಗೆ ಉಗ್ರ ಸಂಘಟನೆ ಐಸಿಸ್ ಸ್ಕೆಚ್ ಹಾಕಿರುವ ಹಿನ್ನೆಲೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಕೇರಳ ಪೊಲೀಸರು ಸೂಚನೆ ಹೊರಡಿಸಿದ್ದಾರೆ. ​

ಉಗ್ರರ ಸಂಚಿನ ಬಗ್ಗೆ ಗುಪ್ತಚರ ಇಲಾಖೆಯಿಂದ ಕೇರಳ ಪೊಲೀಸರಿಗೆ ಮಾಹಿತಿ ಬಂದಿರುವ ಬೆನ್ನಲ್ಲೇ ತ್ರಿಶ್ಯೂರ್ ನಲ್ಲಿ ರೈಲ್ವೇ ಪೊಲೀಸರಿಂದ ಮಲೆಯಾಳಂನಲ್ಲಿ ಪತ್ರ ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗೆ ಐಸಿಸ್ ಬೆದರಿಕೆಯ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆಡಿಯೋದಲ್ಲಿ ಐಸಿಸ್ ಉಗ್ರನೊಬ್ಬ ವಾಹನಗಳನ್ನು ಬಳಸಿ ದಾಳಿಗೆ ಕರೆ ನೀಡಿದ್ದ.

ಹೀಗಾಗಿ ಎಚ್ಚರದಿಂದ ಇರುವಂತೆ ಅಯ್ಯಪ್ಪ ಮಾಲಾಧಾರಿಗಳಿಗೆ ಪೊಲೀಸರ ಸೂಚನೆ ನೀಡಲಾಗಿದೆ.