ಮಂಡ್ಯದಲ್ಲೂ ‘ಅಪ್ಪಾಜಿ ಕ್ಯಾಂಟೀನ್’ ಪ್ರಾರಂಭ

ಮಂಡ್ಯದಲ್ಲೂ ‘ಅಪ್ಪಾಜಿ ಕ್ಯಾಂಟೀನ್’ ಪ್ರಾರಂಭ

ಮಂಡ್ಯ,13 : ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯದ ಇತರೆಡೆ ವಿಸ್ತರಿಸುವ ಮುನ್ನವೇ ಬೆಂಗಳೂರಿನ ಮಾದರಿಯಲ್ಲೇ ಕಡಿಮೆ ದರಕ್ಕೆ ಊಟ, ತಿಂಡಿ ನೀಡುವ 'ಅಪ್ಪಾಜಿ ಕ್ಯಾಂಟೀನ್' ಗುರುವಾರ ಮಂಡ್ಯದಲ್ಲೂ ಆರಂಭವಾಗಿದೆ.

ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದಿಂದ ನಗರಸಭೆ ಮಳಿಗೆಯಲ್ಲಿ ಈ ಕ್ಯಾಂಟೀನ್ ಆರಂಭಿಸಲಾಗಿದೆ. ಸಂಸದ ಪುಟ್ಟರಾಜು ಗುರುವಾರ ಈ ಕ್ಯಾಂಟೀನ್ನಲ್ಲಿ ತಯಾರಿಸಿದ ಆಹಾರ ಸೇವಿಸುವ ಮೂಲಕ ಚಾಲನೆ ನೀಡಿದರು. ಕ್ಯಾಂಟೀನ್ನಲ್ಲಿ ₹10ಕ್ಕೆ ಬೆಳಗ್ಗೆ ತಿಂಡಿ,

ಇದೇ ದರಕ್ಕೆ ಮಧ್ಯಾಹ್ನ ಹಾಗೂ ರಾತ್ರಿ ಮುದ್ದೆ ಊಟ, ₹5ಕ್ಕೆ ಕಾಫಿ ದೊರೆಯಲಿದೆ.