ಅಭಿಗಾಗಿ ಸ್ಟೈಲಿಸ್ಟ್ ಆದ ಐಶು

ಅಭಿಗಾಗಿ ಸ್ಟೈಲಿಸ್ಟ್ ಆದ ಐಶು

ಅಭಿಷೇಕ್‌ ಬಚ್ಚನ್‌ ಯಾವುದೇ ಸಮಾರಂಭಕ್ಕೆ ಬರಲಿ, ಡ್ರೆಸ್‌ ವಿಷಯದಲ್ಲಿ ತುಂಬ ಟಿಪ್‌ಟಾಪ್‌. ಒಮ್ಮೆ ನೋಡಿದವರು ಮತ್ತೊಮ್ಮೆ ಈ ನಟನನ್ನು ನೋಡಲೇಬೇಕು ಎಂಬ ಕ್ಯೂರಿಯಾಸಿಟಿ ಹುಟ್ಟಿಸಿಬಿಡುತ್ತಾರೆ ಅಭಿ. ಹಾಗೆ ನೋಡಿದವರೆಲ್ಲ ಖುಷಿಯಾಗಿ ಬೆಸ್ಟ್‌ ಕಾಮೆಂಟ್‌ ಮಾಡಿದಾಗ, ಈ ನಟ ಅದರ ಕ್ರೆಡಿಟ್‌ ಅನ್ನು ನೇರವಾಗಿ ಪತ್ನಿ ಐಶ್ವರ್ಯಾ ರೈ ಬಚ್ಚನ್‌ಗೇ ಕೊಟ್ಟುಬಿಡುತ್ತಾರೆ. 'ನೋಡಿ, ಇದರಲ್ಲಿ ನನ್ನದೇನೂ ಸರ್ಕಸ್‌ ಇಲ್ಲ. ಈ ಥರ ಬಟ್ಟೆ ಸಿಲೆಕ್ಟ್ ಮಾಡಿದ್ದು, ಸ್ಟಿಚ್‌ ಮಾಡಿಸಿದ್ದು, ಡಿಸೈನ್‌ ಮಾಡಿಸಿದ್ದು ಅಷ್ಟೇ ಅಲ್ಲ ಇವತ್ತು ಈ ಸಮಾರಂಭಕ್ಕೆ ಇದೇ ಬಟ್ಟೆ ಹಾಕಿಕೊಂಡು ಬರಲು ಆರ್ಡರ್‌ ಮಾಡಿದ್ದು ನನ್ನ ಹೆಂಡ್ತಿನೇ' ಎಂದು ಹೇಳಿ, ಕೇಳಿದವರಿಗೆಲ್ಲ ಕಚಗುಳಿ ಇಡುತ್ತಾರೆ ಜೂ. ಬಚ್ಚನ್‌. ಇತ್ತೀಚೆಗೆ ಅಭಿ ಸಿಸ್ಟರ್‌ ಶ್ವೇತಾ, ಫ್ಯಾಷನ್‌ ಷೋವೊಂದರಲ್ಲಿ ರಾರ‍ಯಂಪ್‌ ವಾಕ್‌ ಮಾಡಿದ್ದರು. ಅಲ್ಲಿಗೆ ಬ್ರೈಟ್‌ ಪಿಂಕ್‌ ಬ್ಲೇಜರ್‌ ಮತ್ತು ಡೆನಿಮ್ಸ್‌ ಡ್ರೆಸ್‌ನಲ್ಲಿ ಬಂದಿದ್ದ ಅಭಿಷೇಕ್‌ ಎಲ್ಲರ ಗಮನ ಸೆಳೆದರು. ಆಗ ಆ ಡ್ರೆಸ್‌ ಬಗ್ಗೆ ಎಲ್ಲರೂ ಕೇಳಿದ್ದೇ ಕೇಳಿದ್ದು. ಒನ್ಸ್‌ ಅಗೇನ್‌ ಅದರ ಕ್ರೆಡಿಟ್‌ ಅನ್ನು ಅಭಿ ಕೊಟ್ಟಿದ್ದು ಐಶೂಗೆ. ಅಷ್ಟೇ ಅಲ್ಲ, ಪತಿಗೆ ಐಶ್ವರ್ಯಾ ಫ್ಯಾಷನ್‌ ಟಿಫ್ಸ್‌ಗಳನ್ನೂ ಕೊಡುತ್ತಾರಂತೆ. ಅದೆಲ್ಲ ಸರಿ, ಐಶ್‌ ಅಭಿನಯದ 'ಏ ದಿಲ್‌ ಹೈ ಮುಷ್ಕಿಲ್‌' ಚಿತ್ರ ಎಲ್ಲರ ಗಮನ ಸೆಳೆದಿದೆ. ಅದನ್ನು ನೀವು ನೋಡಿದ್ದೀರಾ? ಅಂತ ಕೇಳಿದರೆ, 'ಅನ್‌ಫಾರ್ಚುನೇಟ್ಲಿ ಇನ್ನೂ ನೋಡಿಲ್ಲ. ಫುಟ್‌ಬಾಲ್‌ ಟೀಮ್‌ ಜತೆ ಸುತ್ತಾಡ್ತಾ ಇದ್ದೆ. ಎಲ್ಲರೂ ಐಶುನನ್ನು ತುಂಬ ಹೊಗಳಿದ್ದಾರೆ. ಮುಂಬರುವ ದಿನಗಳಲ್ಲಿ ಖಂಡಿತ ಈ ಚಿತ್ರ ನೋಡುತ್ತೇನೆ' ಎಂದು ಉತ್ತರವಾಗುತ್ತಾರೆ ಅಭಿಷೇಕ್‌.