ಶುಭಾಶಯ...ಶುಭಾಶಯ

 ಶುಭಾಶಯ...ಶುಭಾಶಯ

ದೆಹಲಿ, ಜೂನ್ 19: ಕಾಂಗ್ರೆಸ್ ಪಕ್ಷದಲ್ಲಿ ಯುವ ರಾಜ ಎಂದೇ ಹೆಸರುವಾಸಿ ಆಗಿರುವ, ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಂದು 47 ನೇ ಹುಟ್ಟು ಹಬ್ಬದ ಶುಭಾಶಯಗಳು. ಯುವರಾಜನಿಗೆ ಭಾರತದ ಪ್ರಧಾನಿ ನರೇಂದ್ರ ಮಯೋದಿ ಅವರು 'ಶ್ರೀ ರಾಹುಲ್ ಗಾಂಧಿ, ನೀವು ಜೀವನಪೂರ್ತಿ ಆರೋಗ್ಯಯುತವಾದ ಜೀವನ ನಡೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ' ಎಂದು ಟ್ವೀಟ್ ಮಾಡಿ ರಾಹುಲ್ ಗಾಂಧಿ ಅವರಿಗೆ ಶುಭಾಶಯ ಕೋರಿದ್ದಾರೆ.

ಇನ್ನು ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರಾಹುಲ್ ಗಾಂಧಿ ಅವರು ಕಳೆದವಾರ, ತಮ್ಮ ಅಜ್ಜಿ ಮನೆಗೆ ಹೋಗುವುದಾಗಿ ತಿಳಿಸಿದ್ದರು. 

ಇನ್ನು ಕಾಂಗ್ರೆಸ್ ನ ಎಲ್ಲ ನಾಯಕರುಗಳು ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.