ರಾಜ್ಯಸಭಾ ನಾಯಕರಾಗಿ ಪುನರಾಯ್ಕೆಯಾದ ಅರುಣ್ ಜೇಟ್ಲಿ

ರಾಜ್ಯಸಭಾ ನಾಯಕರಾಗಿ ಪುನರಾಯ್ಕೆಯಾದ ಅರುಣ್ ಜೇಟ್ಲಿ

ಸಭಾಪತಿ ಡಾ. ಎಂ.ವೆಂಕಯ್ಯನಾಯ್ಡು  ಸಂಸತ್ತಿನ ಮೇಲ್ಮನೆಯಲ್ಲಿ 65 ವರ್ಷದ ಜೇಟ್ಲಿ ಅವರ ಹೆಸರನ್ನು ಸದನದ ನಾಯಕರಾಗಿ ಪ್ರಕಟಿಸಿದರು. ಈ ಮೂಲಕ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಾಜ್ಯಸಭಾ ನಾಯಕರಾಗಿ ಪುನರಾಯ್ಕೆಯಾಗಿದ್ದಾರೆ. 

ಇನ್ನು ರಾಜ್ಯಸಭಾ ನಾಯಕರಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇಮಕ ಮಾಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಅವರಿಂದ ತಮಗೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಜೇಟ್ಲಿ ಅವರನ್ನು ಮೇಲ್ಮನೆ ನಾಯಕರಾಗಿ ಪುನರಾಯ್ಕೆ ಮಾಡಲಾಗಿದೆ ಎಂದು ವೆಂಕಯ್ಯನಾಯ್ಡು ತಿಳಿಸಿದರು.