ಸದ್ಯಕ್ಕಿಲ್ಲ ರಾಹುಲ್‌ಗೆ ಪಟ್ಟಾಭಿಷೇಕ

ಸದ್ಯಕ್ಕಿಲ್ಲ ರಾಹುಲ್‌ಗೆ ಪಟ್ಟಾಭಿಷೇಕ

ಹೊಸದಿಲ್ಲಿ,14: ದೀಪಾವಳಿ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಆಗಿತ್ತು. ಆದರಿನ್ನೂ ಅದಕ್ಕೆ ಕಾಲ ಕೂಡಿ ಬಂದಂತಿಲ್ಲ. ತಾಯಿ ಸೋನಿಯಾ ಗಾಂಧಿ ಮಗನಿಗೆ ಅಧಿಕಾರ ಹಸ್ತಾಂತರ ಮಾಡುವುದು ಮತ್ತಷ್ಟು ತಡವಾಗಲಿದೆ, ಎನ್ನಲಾಗಿದೆ.

ಮುಂದಿನ ತಿಂಗಳು ಚುನಾವಣೆ ಎದುರಿಸಲು ಗುಜರಾತ್ ಸಜ್ಜಾಗಿದ್ದು, ನಂತರವೇ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆಯಲಿದೆ. ಆಗಲೇ ರಾಹುಲ್ ಕಾಂಗ್ರೆಸ್‌ನ ಉನ್ನತ ಸ್ಥಾನ ಅಲಂಕರಿಸಲಿದ್ದಾರೆ, ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.

ಕಳೆದ ಕೆಲವು ತಿಂಗಳಿನಿಂದಲೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ರಾಹುಲ್ ಅಲಂಕರಿಸುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

ಪ್ರಸ್ತುತ ಸೋನಿಯಾ ಗಾಂಧಿ ಗೋವಾ ಪ್ರವಾಸದಲ್ಲಿದ್ದು, ರಾಹುಲ್ ಗಾಂಧಿ ಗುಜರಾತ್ ಚುನಾವಣೆ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದೀಗ ರಾಹುಲ್ ಅವರಿಗೆ ಪಟ್ಟಾಭಿಷೇಕ ಮಾಡಿದರೆ, ಕಾರ್ಯಕರ್ತರನ್ನು ಗೊಂದಲಕ್ಕೆ ತಳ್ಳಿದಂತಾಗುತ್ತದೆ, ಎಂಬ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಗುತ್ತಿದೆ.