ಚೆಡ್ಡಿ ಮಹಿಳೆಯರು ನೋಡಬೇಕೆಂದರೆ ರಾಹುಲ್ ಹಾಕಿ ಮ್ಯಾಚ್ ನೋಡ್ಲಿ

ಚೆಡ್ಡಿ ಮಹಿಳೆಯರು ನೋಡಬೇಕೆಂದರೆ ರಾಹುಲ್ ಹಾಕಿ ಮ್ಯಾಚ್ ನೋಡ್ಲಿ

ನವದೆಹಲಿ,ಅ.13: ಮಹಿಳೆಯರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಶಾಖೆಗಳಲ್ಲಿ ನಿಯೋಜಿಸುವ ಕುರಿತಾದ ಮಾಧ್ಯಮ ವರದಿಗಳನ್ನು ಸಂಘವು ತಳ್ಳಿಹಾಕಿದೆ.

ಸಂಘವು ಕೇವಲ ಪುರುಷರಿಗಾಗಿ ಶಾಖೆಗಳನ್ನು ಆಯೋಜಿಸುತ್ತದೆ. ಈ ಮೂಲಕ ಕುಟುಂಬದ ಸದಸ್ಯರನ್ನು ಇದರೊಂದಿಗೆ ಒಳಗೊಳ್ಳುವಂತೆ ಮಾಡುತ್ತದೆ ಎಂದು ಸಂಘದ ಮುಖಂಡ ಮನಮೋಹನ್ ವೈದ್ಯ ಹೇಳಿದ್ದಾರೆ. ರಾಷ್ಟ್ರೀಯ ಸೇವಿಕಾ ಸಮಿತಿ ಎಂಬ ಬೇರೊಂದು ಸಂಘಟನೆ ಇದ್ದು, ಅದು ಮಹಿಳೆಯರಿಗೆ ಶಾಖೆ ಹಮ್ಮಿಕೊಳ್ಳುತ್ತದೆ. ಈ ಮೂಲಕ ಕುಟುಂಬದಲ್ಲಿ ಆರೆಸ್ಸೆಸ್ ವಾತಾವರಣ ಪಸರಿಸಲು ಇದು ಅನುವು ಮಾಡಿಕೊಡುತ್ತದೆ ಎಂದು ತನ್ನ ಟ್ವೀಟರ್ನಲ್ಲಿ ಸ್ಪಷ್ಟಪಡಿಸಿದೆ.

'ಆರೆಸ್ಸೆಸ್ ಶಾಖೆಗಳಲ್ಲಿ ಚಡ್ಡಿ ಧರಿಸಿದ ಮಹಿಳೆಯರನ್ನು ನಾನು ನೋಡಿಲ್ಲ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆಯ ಬಗ್ಗೆ ವ್ಯಂಗ್ಯವಾಡಿರುವ ವೈದ್ಯ, 'ಚಡ್ಡಿ ಧರಿಸಿದ ಮಹಿಳೆಯರನ್ನು ನೋಡಬೇಕು ಎಂದರೆ ರಾಹುಲ್ ಮಹಿಳಾ ಹಾಕಿ ಪಂದ್ಯಕ್ಕೆ ಹೋಗುವುದು ಉತ್ತಮ ಎಂದು' ಹೇಳಿದ್ದಾರೆ.