ತಾವು ಶಿವನ ಭಕ್ತ : ರಾಹುಲ್‌ ಗಾಂಧಿ..!

 ತಾವು ಶಿವನ ಭಕ್ತ : ರಾಹುಲ್‌ ಗಾಂಧಿ..!

ಪಟನ್‌,14: ಬಿಜೆಪಿಗೆ ಪ್ರತಿತಂತ್ರ ರೂಪಿಸುತ್ತಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ತಮ್ಮನ್ನ ತಾವು ಶಿವನ ಭಕ್ತ ಎಂದುಕೊಂಡಿದ್ದಾರೆ.

ಗುಜರಾತ್‌ ವಿಧಾನ ಸಭೆ ಚುನಾವಣೆ ಪ್ರಚಾರದಲ್ಲಿರುವ ರಾಹುಲ್‌ ಇಲ್ಲಿನ ಪ್ರಖ್ಯಾತ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಪಟನ್‌ನ ವೀರ್‌ ಮೇಘ್‌ಮಯ ದೇಗುಲಕ್ಕೆ ರಾಹುಲ್‌ ಸೋಮವಾರ ಭೇಟಿ ನೀಡಿದ್ದರು. ಶನಿವಾರದಂದು ಅಂಬಾಜಿ ಹಾಗೂ ಅಕ್ಷರಧಾಮ ದೇಗುಲಕ್ಕೆ ರಾಹುಲ್‌ ಭೇಟಿ ನೀಡಿದ್ದರು.

ಗುಜರಾತ್‌ ಅಭಿಯಾನ ಆರಂಭಿಸಿರುವ ರಾಹುಲ್‌ ಸೆಪ್ಟೆಂಬರ್‌ನಲ್ಲಿ ದ್ವಾರಕಾನಾಥ ದೇಗುಲಕ್ಕೆ ಭೇಟಿ ನೀಡಿದ್ದರು.

ರಾಹುಲ್‌ರ ನಡೆಗೆ ಪ್ರತಿಕ್ರಿಯಿಸಿರುವ ಆಡಳಿತಾರುಢ ಬಿಜೆಪಿ, ಮತಗಳಿಗಾಗಿ ರಾಹುಲ್‌ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದೆ.

ಡಿಸೆಂಬರ್‌ 9 ಹಾಗೂ 14ರಂದು ಗುಜರಾತ್‌ ವಿಧಾನಸಭಾ ಚುನಾವಣೆ ನಡೆಯಲಿದ್ದು ನಾಲ್ಕು ದಿನಗಳ ಬಳಿಕ ಫಲಿತಾಂಶ ಪ್ರಕಟವಾಗಲಿದೆ.