ಯಡಹಳ್ಳಿ ಸಿದ್ದರಾಮ ಶಿವಯೋಗಿಗಳ ಪೂಣ್ಯರಾಧನೆ

ಯಡಹಳ್ಳಿ ಸಿದ್ದರಾಮ ಶಿವಯೋಗಿಗಳ ಪೂಣ್ಯರಾಧನೆ

ಬಾಗಲಕೋಟ, ನ.8 : ತಾಲೂಕಿನ ಯಡಹಳ್ಳಿ ಗ್ರಾಮದ ಅಜಾತ ನಾಗಲಿಂಗೇಶ್ವರ ಸಾಧು ಮಠದಲ್ಲಿ ಪೂಜ್ಯ ಶಿವಯ್ಯ ಅಪ್ಪನವರ, ಪೂಜ್ಯ ಬಸವಾನಂದ ಭಾರತಿ ಸ್ವಾಮಿಗಳ ನೇತೃತ್ವದಲ್ಲಿ ಸದ್ಗುರು ಸಿದ್ದರಾಮ ಶಿವಯೋಗಿಗಳ 43ನೇ ಪುಣ್ಯಾರಾಧನೆ ಇದೇ 11 ರಿಂದ ಪ್ರಾರಂಭಗೊಂಡು 13 ರಂದು ರಥೋತ್ಸವದಿಂದ ಮಂಗಲಗೊಳ್ಳಲಿದೆ.
    ದಿ.11 ರಂದು ಬೆಳಿಗ್ಗೆ 6 ಗಂಟೆಗೆ ನಾಗಲಿಂಗೇಶ್ವರ ಗದ್ದುಗೆಗೆ ಹಾಗೂ ಸಿದ್ದರಾಮೇಶ್ವರರ ಪುತ್ಥಳಿಗೆ ರುದ್ರಾಭಿಷೇಕ ನಡೆದು, 7ಕ್ಕೆ ಅದ್ವೈತ ಧ್ವಜಾರೋಹಣ, 7.30ಕ್ಕೆ ಅಂಕಲಿ ಮಠದ ವೀರಭದ್ರ ಸ್ವಾಮಿಗಳಿಂದ ಕಳಸ ಸ್ಥಾಪನೆ, 8.30ಕ್ಕೆ ಸಾಮೂಹಿಕ ಭಗದ್ಗೀತ ಪಾರಾಯಣ, ಸಂಜೆ 6.30ಕ್ಕೆ ಸರಸ ಸಂಗೀತ ಸಾಹಿತ್ಯ ಸಲ್ಲಾಪನೆ ಶಂಭುಲಿಂಗ ಎಂಬ ವಿಷಯದ ಮೇಲೆ ಪ್ರವಚನ ಜರುಗಲಿದೆ. 
ದಿ.12 ರಂದು ಬೆಳಿಗ್ಗೆ 7 ಗಂಟೆಗೆ ಶಿವಮಹಿಮ್ನಾ ಸ್ತೋತ್ರದೊಂದಿಗೆ ಶಿವನಾಮ ಸಪ್ತಾಹ ಪ್ರಾರಂಭವಾಗುವುದು. 9.30ಕ್ಕೆ ಸರ್ವಧರ್ಮಾನ್ ಪರಿತ್ಯಜ್ಯ ಎಂಬ ವಿಷಯದ ಮೇಲೆ ಪ್ರವಚನ ನಡೆಯುವದು. ಸಂಜೆ 6.30ಕ್ಕೆ ಗುರುವಿನ ಗುಲಾಮನಾಗುವ ತನಕ ಎಂಬ ವಿಷಯದ ಮೇಲೆ ಪ್ರವಚನ ನಡೆಯಲಿದೆ ಅಂದೇ ಐರಿಣಿ ಹೊಳೆ ಮಠದ ಪೂಜ್ಯ ಬಸವರಾಜ ದೇಶಿಕೇಂದ್ರದ ಸ್ವಾಮಿಗಳಿಂದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳ್ಳುವುದು. ಅಂದು ರಾತ್ರಿ ಪೂಜ್ಯ ಬಸವಾನಂದ ಭಾರತಿ ಸ್ವಾಮಿಗಳಿಗೆ ನಾಣ್ಯ ತುಲಾಭಾರ ನಡೆಯುವದು. 
ದಿ.13 ರಂದು ಬೆಳಿಗ್ಗೆ 7.30ಕ್ಕೆ ಶಿವನಾಮ ಸಪ್ತಾಹ ಸಮಾಪ್ತಗೊಂಡು 9 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಹಾಯ್ದು ಮಠಕ್ಕೆ ಆಗಮಿಸುವುದು. ಸಂಜೆ 5 ಗಂಟೆಗೆ ರಥೋತ್ಸವ ಜರುಗುವುದು. 
ಈ ಕಾರ್ಯಕ್ರಮದಲ್ಲಿ ಕಟ್ನೂರಿನ ಚನ್ನಬಸವ ದೇಸಿಕೇಂದ್ರ ಸ್ವಾಮಿಗಳು, ಪಿ.ಜಿ.ಹುಣಶ್ಯಾಳದ ನಿಜಗುಣ ದೇವರು, ಹರಳಕಟ್ಟಿಯ ಅಭಿನವ ರೇವಣಸಿದ್ದೇಶ್ವರ ಸ್ವಾಮಿಗಳು ಚಿಕ್ಕೂರಿನ ಅದ್ವೈತಾನಂದ ಭಾರತಿ ಸ್ವಾಮಿಗಳು, ಅನಗವಾಡಿಯ ಮಾತೋಶ್ರೀ ಅನುಸೂಯಾ ತಾಯಿಯವರು, ಬ್ಯಾತನಾಳದ ಹನುಮಾನಂದ ಸ್ವಾಮಿಗಳು, ಹೂಲಗೇರಿಯ ವೀರಯ್ಯ ಸ್ವಾಮಿಗಳು ಆಗಮಿಸಲಿದ್ದು, ವಿಷೇಶ ಆಹ್ವಾನಿತರಾಗಿ ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಬೀಳಗಿ ಶಾಸಕ ಜೆ.ಟಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ಜಿ.ಪಂ ಸದಸ್ಯ ಹೂವಪ್ಪ ರಾಠೋಡ ಆಗಮಿಸಲಿದ್ದಾರೆ.