ನಗರಕ್ಕೆ ನಾಳೆ ಸೋಂದಾ ಸ್ವರ್ಣವಲ್ಲಿ ಶ್ರೀಗಳು

ನಗರಕ್ಕೆ ನಾಳೆ ಸೋಂದಾ ಸ್ವರ್ಣವಲ್ಲಿ ಶ್ರೀಗಳು

ಬಾಗಲಕೋಟೆ ಆ,12 ಃ ಭಗವದ್ಗೀತಾ ಅಭಿಯಾನದ ರೂವಾರಿ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಮೂರು ದಿನಗಳ ಭೇಟಿಗಾಗಿ ದಿ. 13 ರಂದು ನಗರಕ್ಕೆ ಆಗಮಿಸಲಿದ್ದಾರೆ.
    ನವನಗರದ ಸೆಕ್ಟರ್ ನಂ. 52 ರ ಇ-10 ಪ್ಲಾಟïನಲ್ಲಿರುವ ಶಿವರಾಮ ಹೆಗಡೆ ಅವರ ನಿವಾಸದಲ್ಲಿ ವಾಸ್ತವ್ಯ ಮಾಡಲಿರುವ ಶ್ರೀಗಳು ನವ್ಹಂಬರ 2 ರಿಂದ 30 ರವರೆಗೆ ನಡೆಯಲಿರುವ ಗೀತಾ ಅಭಿಯಾನದ ಕುರಿತಂತೆ ಮಾರ್ಗದರ್ಶನ ಮಾಡಲಿದ್ದಾರೆ. 
    ಅಭಿಯಾನದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆಯ 6ನೇ ಅಧ್ಯಾಯ ಪಠಿಸುವ ಕಾರ್ಯಕ್ರಮ ಇದ್ದು ದಿ. 14 ರಂದು ಬೆಳಿಗ್ಗೆ 11 ಗಂಟೆಗೆ ಬ.ವಿ.ವ. ಸಂಘದ ಬಿ.ಇಡಿ. ಮಹಾವಿದ್ಯಾಲಯದಲ್ಲಿ ಪ್ರವಚನ ನೀಡಲಿದ್ದು ಮಧ್ಯಾಹ್ನ 3.30 ಗಂಟೆಗೆ ಕಣವಿ ವೀರಭದ್ರೇಶ್ವರ ಸಾಂಸ್ಕøತಿಕ ಭವನದಲ್ಲಿ ಆಸಕ್ತರು, ಮಾತೆಯರು ಹಾಗೂ ಶಿP್ಷÀಕ ವರ್ಗವನ್ನುದೆÂ್ದೀಶಿಸಿ ಗೀತಾ ಸಾರದ ಕುರಿತು ಪ್ರವಚನ ನೀಡುವರು. 
    ದಿ. 13 ರಿಂದ 15 ರವರೆಗೆ ಶ್ರೀಗಳು ವಾಸ್ತವ್ಯ ಮಾಡಿ ಅಭಿಯಾನವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ಭಾಗವಹಿಸಿ ಶ್ರೀಗಳ ದರ್ಶನ, ಆಶೀರ್ವಾದ ಪಡೆಯಲು ಶಿವರಾಮ ಹೆಗಡೆ (9343111380) ಅವರು ವಿನಂತಿಸಿಕೊಂಡಿದ್ದಾರೆ.