ಲಿಂಗಾಯತ ಮಹಾ ರ್ಯಾಲಿ ನ.26ಕ್ಕೆ 

ಲಿಂಗಾಯತ ಮಹಾ ರ್ಯಾಲಿ ನ.26ಕ್ಕೆ 

ವಿಜಯಪುರ,ಸೆ.30: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಒತ್ತಾಯಿಸಿ, ವಿಜಯಪುರದಲ್ಲಿ ನವಂಬರ್ 19 ರಂದು ಹಮ್ಮಿಕೊಂಡಿದ್ದ, ಲಿಂಗಾಯತ ಮಹಾ ರ್ಯಾಲಿಯನ್ನು ನವಂಬರ್ 26 ರವಿವಾರ ಮೂಂದೂಡಲಾಗಿದೆ. ಅಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ವಿವಿಧ ಬಸವಾದಿ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ನವಂಬರ್ 26 ರಂದು ವಿಜಯಪುರದಲ್ಲಿ ಈ ಮಹಾ ರ್ಯಾಲಿಯನ್ನು ನಡೆಸುವ ಕುರಿತು ತಿರ್ಮಾನ ಕೈಗೊಂಡಿದ್ದಾರೆ.