ವಿಶ್ವ  ಏಡ್ಸ್ ಮುಕ್ತ ದಿನಾಚರಣೆ ಕೈಗೊಂಡ ಮುಧೋಳ

ವಿಶ್ವ  ಏಡ್ಸ್ ಮುಕ್ತ ದಿನಾಚರಣೆ ಕೈಗೊಂಡ ಮುಧೋಳ

ಮುಧೋಳ, ಡಿ.2: ಆರೋಗ್ಯ ಎಲ್ಲರ ಹಕ್ಕು ನನ್ನ ಆರೋಗ್ಯ ನನ್ನ ಹಕ್ಕು ಎಂಬ ಧೋರಣೆಯೊಂದಿಗೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಕ್ಷನ್ ಸೊಸೈಟಿ ಬೆಂಗಳೂರು, ತಾಲೂಕಾಡಳಿತ, ತಾಲೂಕ ಪಂಚಾಯತ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚೃತನ್ಯ ಏಡ್ಸ್ ಪ್ರಿವೆನಕ್ಷನೆ ಮಹಿಳಾ ಸಂಘ, ಸಾರ್ವಜನಿಕ ಆಸ್ಪತ್ರೆ, ರೆಡ್ ರಿಬ್ಬನ್ ಕ್ಲಬ್ ಸಾರ್ವಜನಿಕ ಶಿಕ್ಷಣ ಇಲಾಖೆ ಕಾನೂನು ಸೇವಾ ಪ್ರಾಧಿಕಾರಿ ಹೀಗೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ತಾಲೂಕಾ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
      ಈ ಕಾರ್ಯಕ್ರಮದಲ್ಲಿ ಕಾನೂನಿನ ಅರವು ಮುಡಿಸಲಾಯಿತಲ್ಲದೆ, ಮಹಾಮಾರಿ ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು. ಹಾಗೂ ಎಚ್.ಆಯ್.ವಿ ಸೊಂಕಿತ ವ್ಯಕ್ತಿಯನ್ನು ಸಾಮಾಜದಲ್ಲಿ ಯಾವ ರೀತಿ ಎಲ್ಲರಂತೆ ಬಾಳಲು ಪ್ರೋತ್ಸಾಹಿಸಕೆಂಬ ಕೆಲವು ಮಹತ್ವದ ಸಲಹೆಗಳನ್ನು ನೀಡಲಾಯಿತು.