ಬಾಗಲಕೋಟೆಯಲ್ಲಿ ಉಚಿತ ಸೂಪರ್ ಸ್ಪೆಷಾಲಿಟಿ ಸಲಹಾ ಶಿಬಿರ

ಬಾಗಲಕೋಟೆಯಲ್ಲಿ ಉಚಿತ ಸೂಪರ್ ಸ್ಪೆಷಾಲಿಟಿ ಸಲಹಾ ಶಿಬಿರ

ಬಾಗಲಕೋಟೆ, ಸೆಪ್ಟೆಂಬರ್ 7, : ಎಲ್ಲರಿಗೂ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬ ಬದ್ಧತೆಯ ಭಾಗವಾಗಿ ಬೆಂಗಳೂರಿನ ಅಪೋಲೊ ಆಸ್ಪತ್ರೆ ಬಾಗಲಕೋಟೆಯ ಅಲ್ಲಮಪ್ರಭು ಹೈಟೆಕ್ ಆಸ್ಪತ್ರೆಯಲ್ಲಿ ಈ ತಿಂಗಳ 9ರಂದು ಉಚಿತ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸಲಹಾ ಶಿಬಿರ ಹಮ್ಮಿಕೊಂಡಿದೆ.
ಬಾಗಲಕೋಟೆಯ ರೈಲು ನಿಲ್ದಾಣ ರಸ್ತೆಯಲ್ಲಿರುವ ಪಟೇಲ್ ಲೇಔಟ್‍ನ ಆಸ್ಪತ್ರೆ ಆವರಣದಲ್ಲಿ ಶಿಬಿರ ನಡೆಯಲಿದೆ. ಬೆಂಗಳೂರು ಅಪೋಲೋ ಆಸ್ಪತ್ರೆಯ ತಜ್ಞ ವೈದ್ಯರು ಅಂದು ಬೆಳಿಗ್ಗೆ 10.30 ಇಂದ ಸಲಹೆಗೆ ಲಭ್ಯರಿರುತ್ತಾರೆ. ವೈದ್ಯರಿಂದ ಸೆಕೆಂಡ್ ಒಪೀನಿಯನ್ ಪಡೆಯಲು ಬಯಸುವವರು ಶಿಬಿರದಲ್ಲಿ ವಿಶೇಷ ತಜ್ಞರನ್ನು ಭೇಟಿ ಮಾಡಬಹುದಾಗಿದೆ. ಶಿಬಿರಕ್ಕೆ ಆಗಮಿಸುವ ರೋಗಿಗಳು ತಮ್ಮ ಹಳೆಯ
ವೈದ್ಯಕೀಯ ವರದಿಗಳ ದಾಖಲೆಗಳನ್ನು ಹಾಗೂ ಹೆಲ್ತ್ ಇನ್ಶುರೆನ್ಸ್ ದಾಖಲೆ/ ಹೆಲ್ತ್ ಸ್ಕೀಮ್ ಕಾರ್ಡ್‍ಗಳಿದ್ದಲ್ಲಿ ತರಬೇಕು.
ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಹಾಗೂ ರೋಗ ತಡೆ ಹಾಗೂ ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ನೆರವಾಗುವುದು ಹಾಗೂ ವಿವಿಧ ಸ್ಪೆಷಾಲಿಟಿಗಳಡಿ ಚಿಕಿತ್ಸಾ ವಿಧಿವಿಧಾನಗಳ ಬಗ್ಗೆ ಅರಿವು ಮೂಡಿಸುವುದು. ಕೀಲು ನೋವು, ಹೃದಯ ಸಮಸ್ಯೆ ಹಾಗೂ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಅಪೋಲೊ ಆಸ್ಪತ್ರೆ ಜಾಲದ ಸೂಪರ್ ಸ್ಪೆಷಲಿಸ್ಟ್‍ಗಳನ್ನು ಭೇಟಿ ಮಾಡಿ ಉಚಿತ ಸಲಹೆ  ಪಡೆಯಬಹುದಾಗಿದೆ.