ಅ.2 ರಂದು ಉಚಿತ ನೇತ್ರ ತಪಾಸಣೆ ಶಿಬಿರ

ಅ.2 ರಂದು ಉಚಿತ ನೇತ್ರ ತಪಾಸಣೆ ಶಿಬಿರ

ವಿಜಯಪುರ,ಸೆ.30: ಮಾನಸಿ ಬಿರಾದಾರ ಫೌಂಡೇಶನ್‍ವತಿಯಿಂದ ದಿ. ಅಪ್ಪಾಸಾಹೇಬ ಸಂ. ಬಿರಾದಾರ (ಕಡೇಮನಿ) ಅವರ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಬಬಲೇಶ್ವರದ ಗುರುಪಾದೇಶ್ವರ ಶಿವಾನುಭವ ಮಂಟಪದಲ್ಲಿ ಅಕ್ಟೋಬರ್ 2 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಿರಾದಾರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಸುನೀಲ ಗು. ಬಿರಾದಾರ ಅವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಮ್ಮಿಕೊಳ್ಳಲಾಗಿದೆ. 
ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಟ್ರಸ್ಟಿಗಳಾದ ಬಾಬಣ್ಣ ಬಿರಾದಾರ, ಬಸನಗೌಡ ಬಿರಾದಾರ, ಮಹಾದೇವ ಬಿರಾದಾರ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.