ದೈಹಿಕ-ಮಾನಸಿಕ ಸಧೃಡತೆಗೆ ಕ್ರೀಡೆಯ ಪಾತ್ರ ಅನನ್ಯ : ಮಂಜುನಾಥ

ದೈಹಿಕ-ಮಾನಸಿಕ ಸಧೃಡತೆಗೆ ಕ್ರೀಡೆಯ ಪಾತ್ರ ಅನನ್ಯ : ಮಂಜುನಾಥ

ವಿಜಯಪುರ,ಜ.1: ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಲಾ ವಾರ್ಷೀಕೋತ್ಸವಕ್ಕೆ ಚಾಲನೆ ನೀಡಲಾಯಿತು.

ಸಂಸ್ಥೆಯ ನಿರ್ದೇಶಕ ಹಾಗೂ ಮುಖ್ಯ ಅತಿಥಿಯಾಗಿ ಮಂಜುನಾಥ ಕೌಲಗಿ ಕ್ರೀಡಾ ಜ್ಯೋತಿ ಬೆಳಗುವ ಮುಖಾಂತರ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ, ಕ್ರೀಡೆಗಳು ಪಠ್ಯೇತರ ಚಟುವಟಿಕೆಗಳಾಗಿದ್ದು, ಮಕ್ಕಳ ಸಾಧನೆಗೆ ಪೂರಕವಾದ ಚಟುವಟಿಕೆಯಾಗಿದೆ ಎಂದರು. ಮುಖ್ಯವಾಗಿ ಮಕ್ಕಳ ಹಾಗೂ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಸಧೃಡರಾಗಲು ಸಹಾಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಕ್ರೀಡಾ ಕ್ಷೇತ್ರದಲ್ಲಿ ಹಲವಾರು ಆಯ್ಕೆಗಳು ಇವೆ ಆದರೆ ಇಂದಿನ ಯುವಕರು ಕೇವಲ ಕ್ರಿಕೆಟ್ ಆಟಕ್ಕೆ ಮಾತ್ರ ಮಹತ್ವ ಕೊಟ್ಟು ಉಳಿದ ಆಟಗಳಾದ ಕಬಡ್ಡಿ,ಕುಸ್ತಿ,ಕೊಕೊ ಭಾರತದ ಕ್ರೀಡೆಯಾದ ಹಾಕಿ ಇವುಗಳನ್ನು ಮೂಲೆಗುಂಪನ್ನಾಗಿ ಮಾಡಲಾಗುತ್ತಿದೆ. ಆದ್ದರಿಂದ ದೇಸಿ ಕ್ರೀಡೆಗಳಿಗೆ ಮಹತ್ವ ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡೆಗಳ ಬಗ್ಗೆ ಮಹತ್ವ ಸಾರುವುದು ಯುವ ಪೀಳಿಗೆಯ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಶಾಲಾ ಸಂಯೋಜಕ ಎನ.ಜಿ.ಯರನಾಳ, ಮುಖ್ಯ ಗುರುಗಳಾದ ಎಸ್.ಎಸ್.ದೊಡಮನಿ, ಎಸ್.ಬಿ. ಹೆಗಳಾಡಿ, ದೈಹಿಕ ಶಿಕ್ಷಕರುಗಳಾದ ಪ್ರೀತಿ ಕಾಳೆ, ಡಿ.ಎಮ್.ಸಿಂಧೇ, ಎಮ್.ಸಿ.ಸಂಗಮ, ಎಸ್.ಎನ.ಆಲಮೇಲ, ರಾಠೋಡ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಸ್.ಎಮ್.ಬಕ್ಷಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.