ಪ್ರತಿಯೊಬ್ಬರು ಕರಾಟೆ ಕಲಿಯುವ ಅಗತ್ಯವಿದೆ : ಗಂಗಶೆಟ್ಟಿ

ಪ್ರತಿಯೊಬ್ಬರು ಕರಾಟೆ ಕಲಿಯುವ ಅಗತ್ಯವಿದೆ : ಗಂಗಶೆಟ್ಟಿ

ವಿಜಯಪುರ,ಸೆ.7: ಕರಾಟೆ ಆತ್ಮರಕ್ಷಣೆಗಾಗಿ ಹುಟ್ಟಿಕೊಂಡ ಏಕೈಕ ವಿದ್ಯೆಯಾಗಿದ್ದು ಎಲ್ಲರೂ ಕರಾಟೆ ತರಬೇತಿ ಪಡೆಯುವುದು ಅವಶ್ಯಕವಾಗಿದೆ ಎಂದು ತಾಲೂಕಾ ದೈಹಿಕ ಪರಿವೀಕ್ಷಕ ಎಸ್.ಸಿ.ಗಂಗಶೆಟ್ಟಿ ಹೇಳಿದರು.
ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಒಳಕ್ರೀಡಾಂಗಣದಲ್ಲಿ ವಿಜಯಪುರ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ತಾಲುಕಾ ಮಟ್ಟದ ಪ್ರೌಢ ಹಾಗೂ ಪ್ರಾಥಮಿಕÀ ಶಾಲಾ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೂಲತ ಕರಾಟೆ ಭಾರತ ದೇಶದ್ದು. ಆದರೆ ಇದು ಸ್ಥಳೀಯವಾಗಿ ಹೆಚ್ಚಿನ ಆಸಕ್ತಿ ತೋರದ ಕಾರಣ ನಮ್ಮ ದೇಶದಲ್ಲಿ ಕರಾಟೆಯು ಪ್ರಚಲಿತಗೊಳ್ಳಲಿಲ್ಲಾ. ಆದರೆ ಇತ್ತಿಚಿನ ದಿನಗಳಲ್ಲಿ ದೇಶಾದ್ಯಂತ ಕರಾಟೆ ಕ್ರೀಡೆ ಹೆಚ್ಚಿನ ಮಹತ್ವ ಪಡೆದಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಸ್ಪರ್ಧೆಯಲ್ಲಿ ಸುಮಾರು 15 ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯ ವಿಜೇತರಿಗೆ ಅಂತಿಮವಾಗಿ ಪ್ರಮಾನ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಆರ್.ಎಸ್.ಕನಕರಡ್ಡಿ, ಎಚ್.ಎ.ಮಮದಾಪೂರ, ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎ.ವಾಯ್.ಪಟೇಲ, ಜಿಲ್ಲಾದ್ಯಕ್ಷ ಶಿವುಕುಮಾರ ಶಾರದಳ್ಳಿ, ಉಪಾಧ್ಯಕ್ಷ ಪ್ರೇಮಾನಂದ ನಾಗರೇಶ ಸೇರಿದಂತೆ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಜಿಲ್ಲೆಯ ತಾಲುಕಾ ಕರಾಟೆ ತರಬೇತುದಾರರು ಇದ್ದರು.