ಇಂದು ಬೆಳ್ಳಿ ತೆರೆಗೆ ಅಪ್ಪಳಿಸಲಿರುವ ‘ಜಾನಿ ಜಾನಿ ಯಸ್ ಪಪ್ಪಾ’

ಇಂದು ಬೆಳ್ಳಿ ತೆರೆಗೆ ಅಪ್ಪಳಿಸಲಿರುವ ‘ಜಾನಿ ಜಾನಿ ಯಸ್ ಪಪ್ಪಾ’

ಈ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಿದ್ದ ಜಾನಿ ಮೇರಾ ನಮ ಪ್ರೀತಿ ಮೇರಾ ಕಾಮ್ ಚಿತ್ರತಂಡ ಮತ್ತೊಮ್ಮೆ ಕಮಾಲ್ ಮಾಡಲ್ ಸಿದ್ಧವಾಗಿದೆ. 

ದುನಿಯಾ ವಿಜಯ್ ಹಾಗು ರಂಗಾಯಣ ರಘು ಕಾಮಿಡಿ ನಕ್ಕು ನಗಿಸಲು ಪ್ರೇಕ್ಷಕನ ಮುಂದೆ ಬರಲು ಸಿದ್ಧವಾಗಿದೆ. ಇನ್ನು ಎದೆ ಮೊದಲ ಬಾರಿಗೆ ರಚಿತಾ ರಾಮ್ ಹಾಗು ದುನಿಯಾ ವಿಜಯ್ ಕಾಂಬಿನೇಶನ್ ನ ಸಿನಿಮಾ ಈಡಾಗಿರುವುದು ಮತ್ತೊಂದು ರೋಚಕ ವಿಷಯ. 

ಸಿನಿಮಾ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.  ಈ ಚಿತ್ರವನ್ನು ದುನಿಯಾ ಟಾಕೀಸ್ ಮೂಲಕ ನಾಯಕನಟ ದುನಿಯಾ ವಿಜಯ್ ಅವರೇ ನಿರ್ಮಿಸಿರುವುದು ಮತ್ತೊಂದು ವಿಶೇಷವಾಗಿದೆ. ಇನ್ನು ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎಂದು ಚಿತ್ರತಂಡ ತಿಳಿಸಿದೆ. ಅದೇನೆಯಿರಲಿ ಇಷ್ಟೆಲ್ಲ ವಿಶೇಷ ಇರುವ ಈ ಸಿನಿಮಾ ಪ್ರೇಕ್ಷಣ ಮನ ಗೆಲ್ಲುವುದರಲ್ಲಿ ಎರಡು ಮಾತಿಲ್ಲ.