ಕುಡಿದ ಮತ್ತಿನಲ್ಲಿ ಫೋಟೋ ಹಾಕಿದ್ದಾರೆ ?

ಕುಡಿದ ಮತ್ತಿನಲ್ಲಿ ಫೋಟೋ ಹಾಕಿದ್ದಾರೆ ?

ಬೆಂಗಳೂರು : ಕನ್ನಡ ನಟಿ ಸಂಚಿತಾ ಶೆಟ್ಟಿ ಸೇರಿದಂತೆ ತಮಿಳು ಚಿತ್ರರಂಗದ ಪ್ರಮುಖ ನಟ ನಟಿಯರ ಖಾಸಗಿ ಫೋಟೋಗಳನ್ನು ಟ್ವೀಟ್ ಮಾಡುವ ಮೂಲಕ ಗಾಯಕಿ ಸುಚಿತ್ರಾ ಕಾರ್ತಿಕ್ ವಿವಾದಕ್ಕೀಡಾಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಂಗಾರುಮಳೆ-2 ನಾಯಕಿ ಸಂಚಿತಾ ಶೆಟ್ಟಿ ನಿನ್ನೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದ್ದೇನೆ, ಆ ವಿಡಿಯೋದಲ್ಲಿರುವುದು ನಾನಲ್ಲ, ನನಗೆ ಸುಚಿತ್ರಾ ಕಾರ್ತಿರ್ ಯಾರೆಂಬುದೇ ಗೊತ್ತಿಲ್ಲ, ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ತಮಿಳು ಖ್ಯಾತ ನಟ ಧನುಷ್ ಹಾಗೂ ತ್ರಿಷಾ ಫೋಟೋ, ಧನುಷ್ ಆಪ್ತ ಗಾಯಕ ಅನಿರುದ್ಧ್, ನಟಿ ಹನ್ಸಿಕಾ ಮೋಟ್ವಾನಿ, ಟಿವಿ ವಾಹಿನಿಯ ನಿರೂಪಕಿ ದಿವ್ಯದರ್ಶಿನಿ ಖಾಸಗಿ ಫೋಟೋಗಳನ್ನು ತಮ್ಮ ಟ್ವಿಟ್ಟರ್ ವಾಲ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಪೋಟೋಗಳು ವೈರಲ್ ಆಗಿವೆ. ಈ ಬಗ್ಗೆ ಗಾಯಕಿ ಸುಚಿತ್ರಾ ಪತಿ ಕಾರ್ತಿಕ್ ಸ್ಪಷ್ಟನೆ ನೀಡಿ, ತನ್ನ ಪತ್ನಿಯ ಟ್ವಿಟ್ಟರ್ ಅಕೌಂಟ್ ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ .ಈಗ ಸುಚಿತ್ರಾ ಕಾರ್ತಿಕ್ ಖಾತೆಯಿಂದ ಟ್ವೀಟ್‍ಗಳು ಡಿಲೀಟ್ ಆಗಿದೆ. ಆದರೆ ಟ್ವಿಟ್ಟರ್ ನಿಂದ ಬೇರೆ ಯಾರೋ ಫೋಟೋ ಅಪ್ ಲೋಡ್ ಮಾಡಲು ಸಾಧ್ಯವಿಲ್ಲ, ಕುಡಿದ ಮತ್ತಿನಲ್ಲಿ ಸುಚಿತ್ರಾ ಕಾರ್ತಿಕ್ ಫೋಟೋ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.