ತಮಿಳಿನ ಖ್ಯಾತ ನಿರ್ದೇಶಕ ಸಿ.ವಿ.ರಾಜೇಂದ್ರನ್ ಇನ್ನು ನೆನಪು ಮಾತ್ರ

ತಮಿಳಿನ ಖ್ಯಾತ ನಿರ್ದೇಶಕ ಸಿ.ವಿ.ರಾಜೇಂದ್ರನ್ ಇನ್ನು ನೆನಪು ಮಾತ್ರ

ಬಹುಭಾಷಾ ನಿರ್ದೇಶಕ  ನಿರ್ದೇಶಕ ಸಿ.ವಿ.ರಾಜೇಂದ್ರನ್ ಅವರು ಇಂದು ತಮ್ಮ ನಿವಾಸದಲ್ಲಿ ವಿಧಿವಶರಾದರು. ವರನಟ ಡಾ.ರಾಜ್‍ಕುಮಾರ್ ನಟಿಸಿದ್ದ ತ್ರಿಮೂರ್ತಿ ಸೇರಿದಂತೆ ಕನ್ನಡದಲ್ಲಿಯೂ ನಿರ್ದೇಶನ ಮಾಡಿದ್ದಾರೆ. 

ಕನ್ನಡ ಸೇರಿದಂತೆ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಚಿತ್ರವನ್ನ್ನು ನಿರ್ದೇಶಿಸಿದ್ದ ರಾಜೇಂದ್ರನ್ ಇನ್ನು ಬರಿ ನೆನಪು ಮಾತ್ರ. ಇವರ ಸಾವು ಭಾರತೀಯ ಚಿತ್ರರಂಗಕ್ಕೆ ಬಾರಿನಷ್ಟವನ್ನುಂಟು ಮಾಡಿದೆ. ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಇವರ ಅಂತಿಮ ದರ್ಶನ ಪಡೆದಿದ್ದಾರೆ.