ಪತ್ನಿ ಪ್ರಿಯಾಗೆ ಶುಭ ಕೋರಿದ ಸುದೀಪ್

ಪತ್ನಿ ಪ್ರಿಯಾಗೆ ಶುಭ ಕೋರಿದ ಸುದೀಪ್

ಬೆಂಗಳೂರು,ನ.9 : ಕಿಚ್ಚ ಸುದೀಪ್ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳು ಮಾಡುವ ಟ್ವೀಟ್ ಗೆ ರೀ-ಟ್ವೀಟ್ ಮಾಡಿ ಅವರಿಗೆ ಸಂತೋಷಪಡಿಸುತ್ತಾರೆ. ಈಗ ಅವರ ಪತ್ನಿ ಪ್ರಿಯಾ ರಾಧಾ ಕೃಷ್ಣನ್ ಅವರಿಗೆ ಶುಭಾಶಯ ಕೋರಿದ್ದಾರೆ.

ಹೌದು. ಸುದೀಪ್ ಅವರ ಪತ್ನಿ ಪ್ರಿಯಾ ಅವರು ಯಾವುದೇ ಸೆಲೆಬ್ರಿಟಿ ಅಲ್ಲ, ಆದರೂ ಅವರು ಯಾವುದೇ ಸೆಲೆಬ್ರಿಟಿಗೂ ಕಮ್ಮಿಯಿಲ್ಲ. ಟ್ವಿಟ್ಟರ್ ನಲ್ಲಿ ಅವರನ್ನು 50 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.

ಪ್ರಿಯಾ ಅವರ ಹಿಂಬಾಲಕರ ಸಂಖ್ಯೆ 50 ಸಾವಿರ ದಾಟಿದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ ಪ್ರಿಯಾ ಥಾಂಕ್ಯೂ ಎಂದು ರಿಪ್ಲೈ ಕೂಡ ಮಾಡಿದ್ದಾರೆ.

“ನನಗೆ 50 ಸಾವಿರ ಫಾಲೋವರ್ಸ್ ಆಗಿದ್ದು, ನನಗೆ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿಮ್ಮ ಪ್ರೀತಿ ನನ್ನ ಜೊತೆ ಹಂಚಿಕೊಂಡಿದಕ್ಕೆ ಧನ್ಯವಾದಗಳು” ಎಂದು ಪ್ರಿಯಾ ಅವರು ಬರೆದುಕೊಂಡಿದ್ದಾರೆ.