36ನೇ ವಸಂತಕ್ಕೆ ಕಾಲಿಟ್ಟ ರಮ್ಯಾ: ರಾಹುಲ್​ ಗಾಂಧಿ ಟ್ವಿಟ್

36ನೇ ವಸಂತಕ್ಕೆ ಕಾಲಿಟ್ಟ ರಮ್ಯಾ: ರಾಹುಲ್​ ಗಾಂಧಿ ಟ್ವಿಟ್

ಬೆಂಗಳೂರು, ನ.29: 36ನೇ ವಸಂತಕ್ಕೆ ಕಾಲಿಟ್ಟ ರಮ್ಯಾಗೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವಿಟರ್​ನಲ್ಲಿ ಶುಭ ಕೋರಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸಾಮಾಜಿಕ ಜಾಲತಾಣ ಸೆನ್ಸೇಷನ್ ರಮ್ಯಾಗೆ ಹುಟ್ಟುಹಬ್ಬದ ಶುಭಾಶಯಗಳು ಅಂತ ಟ್ವಿಟ್​ ಮಾಡಿರುವ ರಾಹುಲ್, ರಮ್ಯಾ ಕಾಂಗ್ರೆಸ್‌ನ ಆಸ್ತಿ ಅಂತ ಬಣ್ಣಿಸಿದ್ದಾರೆ. ನೆಚ್ಚಿನ ನಟಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಬರುತ್ತಿದ್ದು, ಟ್ವೀಟರ್‌ನಲ್ಲಿ #HappyBirthdayRamya ಟ್ರೆಂಡಿಂಗ್ ಆಗುತ್ತಿದೆ.

ಬಹುತೇಕ ಅಭಿಮಾನಿಗಳು 'ರಮ್ಯಾ ಭೂಮಿ ಮೇಲಿರುವ ಅತ್ಯಂತ ವಿಶಿಷ್ಟ ವ್ಯಕ್ತಿ' ಎಂದೇ ಬಣ್ಣಿಸಿದ್ದು, ನಟಿಯ ಫೋಟೋ ಹಾಕಿ ಶುಭ ಹಾರೈಸಿದ್ದಾರೆ. ದಿವ್ಯಾ ಸ್ಪಂದನಾ ಎಂಬ ಅಕೌಂಟ್‌ನಲ್ಲಿ ಆಕೆಯ ಬಾಲ್ಯದ ಅನೇಕ ಫೋಟೋಗಳನ್ನು ಹಾಕಿ ವಿಶ್ ಮಾಡಿದ್ದಾರೆ. ನಟಿಯಾಗಿ ಹೆಸರು ಮಾಡಿರುವ ರಮ್ಯಾ, ರಾಜಕೀಯ ಪ್ರವೇಶಿಸಿದ ನಂತರ ವಿಭಿನ್ನ ಜವಾಬ್ದಾರಿಗಳ ಮೂಲಕ ಹೆಸರು ಮಾಡುತ್ತಿದ್ದಾರೆ.  ಕಾಂಗ್ರೆಸ್, ಸಾಮಾಜಿಕ ಜಾಲತಾಣ ಉಸ್ತುವಾರಿ ಹೊತ್ತಿರೋ ರಮ್ಯಾ, ಮೋದಿ ಹಾಗೂ ಬಿಜೆಪಿ ಸರಕಾರದ ವಿರುದ್ಧ ಮಾತನಾಡುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.