ಅಖಾಡಕ್ಕಿಳಿದ ‘ಪಡ್ಡೆ ಹುಲಿ’

ಅಖಾಡಕ್ಕಿಳಿದ ‘ಪಡ್ಡೆ ಹುಲಿ’

ಹೆಸರಿನಲ್ಲಿ ಹೊಂದು ಹೊಸತನವೊಂದಿರುವ ಪಡ್ಡೆ ಹುಲಿ ಎಲ್ಲರಲ್ಲೂ ಸಿನಿಮಾದ ಹೆಚ್ಚು ಕುತೂಹಲ ಮೂಡಿಸುವಂತೆ ಮಾಡಿದೆ.
ಈ ರೀತಿಯಾಗಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ತನ್ನದೇ ಆದ ವಿಭಿನ್ನ ಚಾಪನ್ನು ಕನ್ನಡ ಚಿತ್ರರಂಗದಲ್ಲಿ ಮೂಡಿಸಿದೆ. ತೇಜಸ್ವಿನಿ ಎಂಟರ್‍ಪ್ರೈ ಸಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿಮಾ9ಪಕ ಕೆ.ಮಂಜುರವರ ಪುತ್ರ ಶ್ರೇಯಸ್ ನಾಯಕ ನಟನಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಇನ್ನು ಸಿನಿಮಾದ ಫೋಟೋಶೂಟ್ ನಿಂದ ಹಿಡಿದು ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸಿದೆ. ಇನ್ನು ಇದೇ ಬುಧವಾರ ಪಡ್ಡೆ ಹುಲಿ ಸಿನಿಮಾ ಹಾಡೊಂದರ ಪ್ರೋಮೋ ರಿಲೀಸ್ ಆಗಲಿದೆ. ನಟ ಶ್ರೇಯಸ್ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಚಿತ್ರತಂಡ ಸಾಂಗ್ ಪ್ರೋಮೋ ರಿಲೀಸ್ ಮಾಡುವ ಉದ್ದೇಶವನ್ನು ಹೊಂದಿದೆ. 

ಚಿತ್ರಕ್ಕೆ ಎಂ.ರಮೇಶ್ ರೆಡ್ಡಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಸಿನಿಮಾಗೆ ಗುರು ದೇಶಪಾಂಡೆ ನಿರ್ದೇಶನವಿದೆ.