ಬಿಗ್ಬಾಸ್ ಮನೆಯ ಒಳ್ಳೆ ಹುಡ್ಗ ಪ್ರಥಮ್‌ಗೆ ಮದುವೆ...!

ಬಿಗ್ಬಾಸ್ ಮನೆಯ ಒಳ್ಳೆ ಹುಡ್ಗ ಪ್ರಥಮ್‌ಗೆ ಮದುವೆ...!

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 4 ವಿಜೇತ ಒಳ್ಳೆ ಹುಡ್ಗ ಖ್ಯಾತಿಯ ನಟ ಪ್ರಥಮ್‌ ಹೊಸ ಬಾಳಿಗೆ ಕಾಲಿರಿಸಲು ಸಿದ್ದವಾಗಿದ್ದಾರೆ. ಪ್ರಥಮ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಹುಡುಗಿಯ ಹೆಸರು ಮಾತ್ರ ರಹಸ್ಯವಾಗಿಯೇ ಇರಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಥಮ್‌ ಹುಡ್ಗಿ ಹೆಸರು ಬೇಡ , ಈಗಲೇ ಹೇಳಿದರೆ ಅವರಿಗೆ ಕಸಿವಿಸಿ ಯಾಗುತ್ತದೆ.ನಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ, ಮನೆಯವರು ಒಪ್ಪಿದ್ದಾರೆ.ಈಗ ನಾನು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು 2 ವರ್ಷದ ಬಳಿಕ ಮದುವೆಯಾಗುತ್ತೇವೆ ಎಂದಿದ್ದಾರೆ. 

ಮೈಸೂರು ಮೂಲದ ಇಂಜಿನಿಯರ್‌ರನ್ನು ವಿವಾಹವಾಗುತ್ತಿರುವುದಾಗಿ ಕ್ಲೂ ಲಭ್ಯವಾಗಿದ್ದು, ಧನುರ್‌ ಮಾಸ ಕಳೆದ ಬಳಿಕ ಎಂಗೇಜ್‌ಮೆಂಟ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. 


Read more at https://www.udayavani.com/kannada/news/film-stars/255261/pratham-ready-for-marriage#RzMLsCh3aTSuZ0b5.99