ಪ್ರಾಣ ಸ್ನೇಹಿತನ ಮನೆಗೆ ಭೇಟಿ ಕೊಟ್ಟ ಅಂಬಿ..!

ಪ್ರಾಣ ಸ್ನೇಹಿತನ ಮನೆಗೆ ಭೇಟಿ ಕೊಟ್ಟ ಅಂಬಿ..!

ಬೆಂಗಳೂರು : ರೆಬಲ್ ಸ್ಟಾರ್ ಅಂಬರೀಶ್ ಅವರು ಬಹಳ ವರ್ಷಗಳ ನಂತರ ತಮ್ಮ ಕುಚುಕು ಗೆಳೆಯ ಡಾ.ವಿಷ್ಣುವರ್ಧನ್ ಅವರ ಮನೆಗೆ ಭೇಟಿ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕುಚುಕು ಗೆಳೆಯರೆಂದೇ ಹೆಸರು ಮಾಡಿದ್ದ ಅಂಬರೀಶ್ ಹಾಗೂ ವಿಷ್ಣುವರ್ಧನ್ ರವರ ಸ್ನೇಹ, ಎಂದಿಗೂ ಸ್ಯಾಂಡಲ್ ವುಡ್ ಮಂದಿ ಮರೆಯಲಾಗಲು ಸಾಧ್ಯವಿಲ್ಲ. 

ವಿಷ್ಣುವರ್ಧನ್ ಅವರು  ಅಗಲಿದ ಬಹಳ ವರ್ಷಗಳ ನಂತರ ಇದೀಗ ಅಂಬರೀಶ್ ವಿಷ್ಣು ಅವರ ಮನೆಗೆ ಭೇಟಿ ನೀಡಿದ್ದಾರೆ. ಜಯನಗರದಲ್ಲಿ ಅಂಬರೀಶ್ ನಟನೆಯ 'ಅಂಬಿ ನಿಂಗ್ ವಯಸ್ಸಾಯ್ತೊ' ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ಹತ್ತಿರದಲ್ಲೇ ಇದ್ದ ವಿಷ್ಣುವರ್ಧನ್ ಮನೆಗೆ ತೆರಳಿ ಭಾರತಿ ವಿಷ್ಣುವರ್ಧನ್ ಜೊತೆ ಕೆಲ ಕಾಲ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.