ಶಿಶು ಯೋಜನೆಯನ್ನು ಸಮಗ್ರವಾಗಿ ಉಪಯೋಗಿಸಿ: ಕೆ.ವಾಯ್. ಉಕ್ಕಲಿ

ಶಿಶು ಯೋಜನೆಯನ್ನು ಸಮಗ್ರವಾಗಿ ಉಪಯೋಗಿಸಿ: ಕೆ.ವಾಯ್. ಉಕ್ಕಲಿ

ಗದ್ದನಕೇರಿ,ಸೆ.08; 2ನೇ ಅಕ್ಟೋಬರ್ 1970 ರಂದು ಪ್ರಾರಂಭವಾದ ಶಿಶು ಯೋಜನೆ ಸಮಗ್ರವಾಗಿ ಉಪಯೋಗವಾಗಬೇಕಿದೆ. ಮಕ್ಕಳ ಪಾಲನೆ ಪೋಷಣೆ ಹಾಗೂ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯಲು ಮಕ್ಕಳಿಗೆ ಕೊಡುವ ಪೋಷಕಾಂಶ ಆಹಾರ ಶಿಶುಗಳಿಗೆ ತಲುಪಬೇಕಾಗಿದೆ ಎಂದು ಕೆ.ವಾಯ್.ಉಕ್ಕಲಿ ಮಾತನಾಡಿದರು.
 ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದ ಗ್ರಾಮ ಪಂಚಾಯತ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬಾಗಲಕೋಟೆ ಸಹಯೋಗದೊಂದಿಗೆ “ಮಾತೃಪೂರ್ಣ ಯೋಜನೆ”ಯ ಅರಿವು ಕಾರ್ಯಕ್ರಮವನ್ನು ಅವರು ಮಾತನಾಡಿದರು.
 ಸಂಪೂರ್ಣವಾಗಿ ಈ ಶಿಶು ಯೋಜನೆ ಮಕ್ಕಳಿಗೆ ತಲುಪದಿರುವದು ವಿಷಾಧಕರ ಸಂಗತಿಯಾಗಿದೆ ಇಸನ್ನು ಅಂಕಿಸಂಖ್ಯೆಯಲ್ಲಿ ಹೇಳುವುದಾದರೆ ಶೇ.40 ರಷ್ಟು ಯೋಜನೆ ವಿಫಲವಾಗಿದೆ. ಸಾಯುವವರ ಸಂಖ್ಯೆ ಆಗ ನಾವಿಬ್ಬರು ನಮಗೊಬ್ಬರು ಎನ್ನವ ಕಾಲವೊಂದಿತ್ತು ಆದರೆ ಈಗ ಹಾಗೇನಿಲ್ಲ ಪರಸ್ಥಿತಿ ಬದಲಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ ತಾಯಂದಿರು ಶಿಕ್ಷಣವಂತರಿದ್ದಾರೆ ಪ್ರತಿ ಲಸಿಕೆಗಳನ್ನು ಹಾಕಿಸುತ್ತಾರೆ ಎಂದು ಅವರು ಹೇಳಿದರು. ತಾಯಂದಿರು ಮುಖ್ಯವಾಗಿ ಮಕ್ಕಳಿಗೆ ಪೌಷ್ಠಿಕ ಆಹಾರ, ಪ್ರತಿನಿತ್ಯ ಕುದಿಸಿದ ನೀರನ್ನು ಕೊಡಬೇಕು ಮುಂಜಾನೆ 11 ರಿಂದ ಮಧ್ಯಾಹ್ನ 3ರ ಒಳಗಡೆ ಊಟಮಾಡಬಹುದೆಂದು ಹೇಳಿದರು.
  ಗರ್ಭಿಣಿ ತಾಯಂದಿರು ಬಹಳ ಎಚ್ಚರಿಕೆಯಿಂದ ತಾವು ಆಹಾರವನ್ನು ಸೇವಿಸಬೇಕು ತಪ್ಪಲು ಪಲ್ಲೆ, ಮಿತವ್ಯಯವಾಗಿ ಕೊಬ್ಬಿಣಾಂಶವುಳ್ಳ ಆಹಾರವನ್ನು ಸೇವಿಸಬೇಕು ಕುದಿಸಿದ ನೀರನ್ನೇ ಕುಡಿಯಬೇಕೆಂದು ಎಸ್.ವಾಯ್.ಗೂಗ್ಯಾಳ ಹೇಳಿದರು. ಗರ್ಭದೊಳಗೆ ಮಗು ಸಂಪೂರ್ಣವಾಗಿ ಆರೋಗ್ಯದಿಂದ ಬದುಕ ಬೇಕಾದರೆ ತಾಯಂದಿರು ಎಚ್ಚರದಿಂದಿರಬೇಕು 7,8,9 ತಿಂಗಳವರೆಗೆ ವೈದ್ಯರ ಸಹಾಯ ಪಡೆಯಬೆಕು ವೈದ್ಯರು ಕೊಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದು ತಾಯಂದಿರಿಗೆ ಕಿವಿಮಾತು ಹೇಳಿದರು.
 ಕಾರ್ಯಕ್ರಮದ ಅಧ್ಯಕ್ಷತೆ ಗ್ರಾ.ಪಂ. ಅಧ್ಯಕ್ಷ ಸಿದ್ಧನಗೌಡ ಜಕ್ಕನಗೌಡರ, ತಾ.ಪಂ ಸದಸ್ಯೆ ನೀನಾಕ್ಷಿ ಹಲಲುರ್ಕಿ.  ಗ್ರಾ.ಪಂ.ಸದಸ್ಯ ಧನಸಿಂಗ್ ರಾಠೋಡ, ಧನ್ವಂತರಿ ಮಾಗಿ, ರೇಣುಕಾ ಗಾಣಿಗೇರ, ಗ್ರಾಮದ ಮುಖ್ಯಸ್ಥರು ಎಸ್.ಎ.ಹಿರೇಮಠ, ಲಕ್ಷ್ಮಣ್ಣ ಮುಚಖಂಡಿ, ನೀಲಪ್ಪ ಕುಂಬಾರ, ಸಂಗಮೇಶ, ಬೂಸಿಹಾಳ ಹಾಗೂ ಗ್ರಾ.ಪಂ. ಪಿಡಿಓ. ಇಂದ್ರಾ ಗಾಣಿಗೇರ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ರೂಪಾ ಇದ್ದಲಗಿ ಕಾರ್ಯಕ್ರಮ ನಿರೂಪಿಸಿದರು.