ಶಾಂತಿನಿಕೇತನದಲ್ಲಿ ನವರಾತ್ರಿ ಗೊಂಬೆ ಪೂಜೆ

ಶಾಂತಿನಿಕೇತನದಲ್ಲಿ ನವರಾತ್ರಿ ಗೊಂಬೆ ಪೂಜೆ

ವಿಜಯಪುರ,ಸೆ.30: ನಗರದ ಪ್ರತಿಷ್ಠಿತ ಶಾಂತಿನಿಕೇತನ  ಶಿಕ್ಷಣ ಸಂಸ್ಥೆಯಲ್ಲಿ ನವರಾತ್ರಿ ಗೊಂಬೆ ಪೂಜೆ ಕಾರ್ಯಕ್ರಮ ಜರುಗಿತು. 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ, ಹಬ್ಬಗಳು ಸನಾತನ ಸಂಸ್ಕøತಿಯನ್ನು ನೆನಪಿಸುತ್ತವೆ. ಮಕ್ಕಳು ಹಬ್ಬಗಳ ಹಿನ್ನಲೆಯನ್ನು ಅರಿತರೆ ಮುಂದಿನ ಪೀಳಿಗೆಗೂ ಕೂಡ ನಮ್ಮ ಸಂಸ್ಕøತಿಯನ್ನು ಕೊಂಡೊಯ್ಯಲು ಸಾಧ್ಯ. ಈ ನವರಾತ್ರಿ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸುವ ಸುಂದರ ಹಬ್ಬ ಒಳ್ಳೆಯತನದ ಗೆಲುವಿನ ಸಂಕೇತ ಎಂದು ನುಡಿದರು. 
ಸುಂದರವಾಗಿ ಮೂಡಿಬಂದ ಈ ಗೊಂಬೆ ಪೂಜೆ ಕಾರ್ಯಕ್ರಮದಲ್ಲಿ ಕು. ಶ್ರೇಯಾ ದೇವಿಯ ಭಕ್ತಿ ಗೀತೆಗಳನ್ನು ಹಾಡಿದಳು. ಶಿಕ್ಷಕ ಶ್ರೀಶೈಲ ಹುಕ್ಕೇರಿ ನಿರೂಪಿಸಿ ವಂದಿಸಿದರು. 
ಈ ಸಂದರ್ಭದಲ್ಲಿ ಶಿಕ್ಷಕರಾದ ಎ.ಎಚ್. ಸಗರ, ಭಾರತಿ ಪಾಟೀಲ, ಅನೀಲ ಬಾಗೇವಾಡಿ, ನಿಕಿತಾ, ಮಧುಮತಿ, ಅನೀತಾ ದೇಸಾಯಿ, ಎಸ್.ಆರ್.ಕಟ್ಟಿಮನಿ, ಸುರೇಖಾ,ಉಮಾ, ತಬಸ್ಸುಮ್, ಸೀಮಾ, ಶೋಭಾ,ದೀಪಾ, ಇಂಧುಮತಿ,ಸಮೀನಾ, ಮೇಘಾ,ಗಿರೀಜಾ,ರಶ್ಮಿ, ಪ್ರತಿಭಾ,ವಿದ್ಯಾ, ಸುನಂದಾ ಮತ್ತಿತರು ಉಪಸ್ಥಿತರಿದ್ದರು.