ನವೆಂಬರ್ 5 ರಂದು sಸಂಗೀತ ಕಾರ್ಯಕ್ರಮ 

ನವೆಂಬರ್ 5 ರಂದು sಸಂಗೀತ ಕಾರ್ಯಕ್ರಮ 

ಬಾಗಲಕೋಟ,17: ಹುಬ್ಬಳ್ಳಿಯಲ್ಲಿ ಅಖಿಲ ಭಾರತ ರಾಜ್ಯ ಗಾಣಿಗ ಯುವ ಘಟಕಕ್ಕೆ ನವೆಂಬರ್ 5 ರಂದು sಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.
ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ಎದುರಿಗೆ ಇರುವ ಸಜ್ಜನ ಸಮಾಜ ಭವನದಲ್ಲಿ ಅಖಿಲ ಭಾರತ ಗಾಣಿಗ ಸಮಾಜದ ಗೌರವಾಧ್ಯಕ್ಷ ಜಿ.ಎಸ್.ಛಬ್ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ ಅಧ್ಯಕ್ಷರಾದ ಮಹಾಲಿಂಗೇಶ ಜಿಗಳೂರ, ತಿಪ್ಪಣ್ಣ ಮಜ್ಜಗಿ, ಆರ್.ಜಿ.ಪಾಟೀಲ, ಕೆ.ಬಿ.ಕುರಹಟ್ಟಿ ಮುಂತಾದವರ ಉಪಸ್ಥಿತಿಯಲ್ಲಿ ಸಮಾಜದ 20 ರಿಂದ 40 ವಯೋಮಾನದ ಯುವಕರನ್ನು ಒಳಗೊಂಡ ರಾಜ್ಯ ಗಾಣಿಗ ಯುವಘಟಕವನ್ನು ರಚಿಸಲಾಗುವುದು ಅದೇ ದಿನ ಪದಾಧಿಕಾರಿಗಳ ನೇಮಕವನ್ನು ಮಾಡಲಾಗುವುದು.
ರಾಜ್ಯದ ಎಲ್ಲಾ ಜಿಲ್ಲೆಗಳ ಗಾಣಿಗ ಸಮಾಜದ ಯುವಕರು ಸಭೆಯಲ್ಲಿ ಭಾಗವಹಿಸುವ ಮೂಲಕ ಗಾಣಿಗ ಸಮಾಜದ ಅಭಿವೃದ್ಧಿಯೊಂದಿಗೆ ಸಮಾಜ ಸಂಘಟನೆಯಲ್ಲಿ ನಿರಂತರ ತೊಡಗುವುದು ಮತ್ತು ಸಮಾಜದ ಬೆಳವಣಿಗೆಗಾಗಿ ವಿಶಿಷ್ಟ ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಘುವುದು ಪ್ರತಿ ಜಿಲ್ಲೆಯ ಗಾಣಿಗ ಸಮಾಜದ ಪ್ರಮುಖರು ಈ ಕುರಿತು ಮುತುವರ್ಜಿ ವಹಿಸಿ ಯುವಕರನ್ನು  ಸಭೆಗೆ ಕಳುಹಿಸಿಕೊಡಬೇಕೆಂದು ಸಂಚಾಲಕ ರಾಜೀವ ಗಾಣಗಿ, ಸಂತೋಷ ತಿಮ್ಮಾಪೂರ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.